LIVE UPDATES : ಗೆಲುವಿನ ಸನಿಹಕ್ಕೆ ಆಸ್ಟ್ರೇಲಿಯ
ಅಹಮದಾಬಾದ್ : ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಫೈನಲ್ ಪಂದ್ಯದಲ್ಲಿ ಭಾರತ ನೀಡಿದ 241 ರನ್ ಗಳ ಬೆನ್ನತ್ತಿದ ಆಸ್ಟ್ರೇಲಿಯಾ ತಂಡ ಭಾರತದ ಬೌಲರ್‌ಗಳ ದಾಳಿಗೆ ನಲುಗಿ, 3 ವಿಕೆಟ್ ಕಳೆದುಕೊಂಡಿದೆ.
2ನೇ ಓವರ್‌ನಲ್ಲಿ ಶಮಿ ಬೌಲಿಂಗ್ ನಲ್ಲಿ ಡೇವಿಡ್ ವಾರ್ನರ್ 7 ರನ್ ಗಳಿಸಿದ್ದಾಗ ವಿರಾಟ್ ಕೊಹ್ಲಿಗೆ ಕ್ಯಾಚ್ ನೀಡಿ ಔಟ್ ಆದರು. ಮಿಷೆಲ್ ಮಾರ್ಷ್ 15 ರನ್ ಗಳಿಸಿ 4.3 ಓವರ್‌ನಲ್ಲಿ ಬೂಮ್ರಾ ಬೌಲಿಂಗ್ ನಲ್ಲಿ ಕೆ ಎಲ್ ರಾಹುಲ್ ಗೆ ಕ್ಯಾಚ್ ನೀಡಿ ಪೆವಿಲಿಯನ್ ಹಾದಿ ಹಿಡಿದರು. ಸ್ಟೀವನ್ ಸ್ಮಿತ್ 6.6 ಓವರ್ ಗಳಲ್ಲಿ 4 ರನ್ ಗಳಿಸಿ ಬೂಮ್ರಾ ಎಸೆತದಲ್ಲಿ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದರು.
ಪ್ರಸಕ್ತ ಟ್ರಾವಿಸ್ ಹೆಡ್ 19 ರನ್ ಹಾಗೂ ಮಾರ್ನಸ್ ಲಾಬುಶೇನ್ ಅವರಿಗೆ ಸಾಥ್ ನೀಡಿ ಕ್ರೀಸ್‌ನಲ್ಲಿದ್ದಾರೆ. ಆಸ್ಟ್ರೇಲಿಯಗೆ ಗೆಲ್ಲಲು 181 ರನ್ ಗಳ ಅವಶ್ಯಕತೆಯಿದೆ.
42.5 ನೇ ಓವರ್ ನಲ್ಲಿ ಸಿರಾಜ್ ಗೆ ವಿಕೆಟ್ ಒಪ್ಪಿಸಿದ ಟ್ರಾವೆಸ್ ಹೆಡ್. ಆಸ್ಟ್ರೇಲಿಯ 239/4
41 ನೇ ಓವರ್ ಮುಕ್ತಾಯ. ಮುಹಮ್ಮದ್ ಸಿರಾಜ್ ಓವರ್‌ನಲ್ಲಿ 5 ರನ್ ಗಳಿಸಿದ ಆಸೀಸ್. ಆಸ್ಟ್ರೇಲಿಯ 230/3
40 ನೇ ಓವರ್ ಮುಕ್ತಾಯ. ಮಾರ್ನಸ್ ಲಾಬುಶೇನ್ ಅರ್ಧ ಶತಕ ದಾಖಲು. ಬೂಮ್ರಾ ಓವರ್‌ನಲ್ಲಿ 6 ರನ್ ಗಳಿಸಿದ ಆಸೀಸ್. ಆಸ್ಟ್ರೇಲಿಯ 225/3
39 ನೇ ಓವರ್ ಮುಕ್ತಾಯ. ಗೆಲುವಿನ ಸನಿಹಕ್ಕೆ ಆಸ್ಟ್ರೇಲಿಯ. ಮುಹಮ್ಮದ್ ಸಿರಾಜ್ ಓವರ್‌ನಲ್ಲಿ 5 ರನ್ ಗಳಿಸಿದ ಆಸೀಸ್. ಆಸ್ಟ್ರೇಲಿಯ 219/3
38 ನೇ ಓವರ್ ಮುಕ್ತಾಯ. ಕುಲ್‌ದೀಪ್ ಯಾದವ್ ಕೊನೆಯ ಓವರ್‌ನಲ್ಲಿ(10ನೇ ಓವರ್) ನಲ್ಲಿ 10 ರನ್ ಗಳಿಸಿದ ಆಸೀಸ್. ಆಸ್ಟ್ರೇಲಿಯ 214/3
37 ನೇ ಓವರ್ ಮುಕ್ತಾಯ. ಬೌಲಿಂಗ್ ನಲ್ಲಿ ಬದಲಾವಣೆ. ಮುಹಮ್ಮದ್ ಸಿರಾಜ್ ಬೌಲಿಂಗ್ ನಲ್ಲಿ 9 ರನ್ ಗಳಿಸಿದ ಆಸೀಸ್. 200ರ ಗಡಿ ದಾಟಿದ ಆಸೀಸ್. ಆಸ್ಟ್ರೇಲಿಯ 204/3
36 ನೇ ಓವರ್ ಮುಕ್ತಾಯ. ಕುಲ್ ದೀಪ್ ಯಾದವ್ ಬೌಲಿಂಗ್ ನಲ್ಲಿ 3 ರನ್ ಗಳಿಸಿದ ಆಸೀಸ್. ಆಸ್ಟ್ರೇಲಿಯ 195/3
35 ನೇ ಓವರ್ ಮುಕ್ತಾಯ. ರವೀಂದ್ರ ಜಡೇಜ ಓವರ್‌ನಲ್ಲಿ 7 ಗಳಿಸಿದ ಆಸೀಸ್. ಆಸ್ಟ್ರೇಲಿಯ 192/3
ಪಂದ್ಯ ವೀಕ್ಷಿಸಲು ಸ್ಟೇಡಿಯಂ ಗೆ ಆಗಮಿಸಿದ ಭಾರತದ ಪ್ರಧಾನಿ ನರೇಂದ್ರ ಮೋದಿ. 95 ಎಸೆತಗಳಲ್ಲಿ ಶತಕ ದಾಖಲಿಸಿದ ಟ್ರಾವೆಸ್ ಹೆಡ್. 34 ನೇ ಓವರ್ ಮುಕ್ತಾಯ. ಕುಲ್ ದೀಪ್ ಯಾದವ್ ಓವರ್ ನಲ್ಲಿ 11 ರನ್ ಗಳಿಸಿದ ಆಸೀಸ್. ಆಸ್ಟ್ರೇಲಿಯ 185/3
33 ನೇ ಓವರ್ ಮುಕ್ತಾಯ. ರವೀಂದ್ರ ಜಡೇಜ ಓವರ್ನಲ್ಲಿ 2 ರನ್ ಗಳಿಸಿದ ಆಸೀಸ್. ಆಸ್ಟ್ರೇಲಿಯ 174/3