LIVE UPDATES : ಗೆಲುವಿನ ಸನಿಹಕ್ಕೆ ಆಸ್ಟ್ರೇಲಿಯ
22 ನೇ ಓವರ್ ಮುಕ್ತಾಯ. ಆಸ್ಟ್ರೇಲಿಯಾ ಖಾತೆ 7 ರನ್ ನೀಡಿದ ಕುಲ್ ದೀಪ್ ಯಾದವ್. 117/3
21 ನೇ ಓವರ್ ಮುಕ್ತಾಯ. ಮುಹಮ್ಮದ್ ಸಿರಾಜ್ ದಾಳಿ. ಅರ್ಧ ಶತಕದ ಸನಿಹ ಟ್ರಾವೆಸ್ ಹೆಡ್. 6 ರನ್ ಪೇರಿಸಿದ ಆಸೀಸ್. 110/3
ಮತ್ತೆ ಬೌಲಿಂಗ್ ಗೆ ಬಂದ ಕುಲ್ ದೀಪ್ ಯಾದವ್. 100 ರನ್ ಗಡಿ ದಾಟಿದ ಆಸ್ಟ್ರೇಲಿಯ. 20 ನೇ ಓವರ್ ಮುಕ್ತಾಯ. ಆಸ್ಟ್ರೇಲಿಯ ಬ್ಯಾಟರ್‌ಗಳ ಜೊತೆಯಾಟ ಮುರಿಯಲು ಭಾರತೀಯ ಬೌಲರ್‌ಗಳ ಹರಸಾಹಸ. ಈ ಓವರ್ ನಲ್ಲಿ 5 ರನ್ ಗಳಿಸಿದ ಆಸೀಸ್. 104/3
19 ನೇ ಓವರ್ ಮುಕ್ತಾಯ. ಸಿರಾಜ್ ಬೌಲಿಂಗ್ ನಲ್ಲಿ 4 ರನ್ ಗಳಿಸಿದ ಆಸ್ಟ್ರೇಲಿಯ. ಮಾರ್ನಸ್ ಲಬುಶೇನ್ ಟ್ರಾವೆಸ್ ಹೆಡ್ 50 ರನ್ ಗಳ ಜೊತೆಯಾಟ. ಆಸೀಸ್ 99/3
18 ನೇ ಓವರ್ ಮುಕ್ತಾಯ. ಕುಲ್ ದೀಪ್ ಯಾದವ್ ಬಿಗು ಬೌಲಿಂಗ್ ದಾಳಿ. ಕೇವಲ ಎರಡು ರನ್. ಆಸ್ಟ್ರೇಲಿಯ 95/3
17 ಓವರ್‌ಗಳ ಮುಕ್ತಾಯ. ಆಸ್ಟ್ರೇಲಿಯ 93 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡಿದೆ. ಟ್ರಾವೆಸ್ ಹೆಡ್ 47 ಎಸೆತಗಳಲ್ಲಿ 40 ರನ್ ಗಳಿಸಿ ಅರ್ಧ ಶತತಕದ ಸನಿಹಕ್ಕೆ. ಮಾನರ್ಸ್ ಲಬುಶೇನ್ 10 ರನ್ ಗಳಿಸಿದ್ದಾರೆ.
ರೋಚಕ ಕ್ಷಣಕ್ಕೆ ಸಾಕ್ಷಿಯಾಗುತ್ತಿರುವ ವಿಶ್ವಕಪ್ ಫೈನಲ್ ಪಂದ್ಯ
ಅಹಮದಾಬಾದ್ : ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಆಸ್ಟ್ರೇಲಿಯ ತಂಡಗಳ ನಡುವಿನ ಫೈನಲ್ ಪಂದ್ಯ ರೋಚಕ ಕ್ಷಣಕ್ಕೆ ಸಾಕ್ಷಿಯಾಗುತ್ತಿದೆ.
ಭಾರತದ ಬೌಲರ್‌ಗಳ ದಾಳಿಗೆ ಸಿಲುಕಿ ಪ್ರಮುಖ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿರುವ ಆಸ್ಟ್ರೇಲಿಯ ಮರು ಹೋರಾಟ ಸಂಘಟಿಸುತ್ತಿದೆ. ಭಾರತ ತಂಡದ ನಾಯಕ ರೋಹಿತ್ ಶರ್ಮಾ ವೇಗದ ಬೌಲಿಂಗ್ ಹಾಗೂ ಸ್ಪಿನ್ ಬೌಲಿಂಗ್ ಗಳ ಸ್ವಿಂಗ್ ತಂತ್ರ ಬಳಸುತ್ತಿದ್ದಾರೆ. ಆ ಮೂಲಕ ಆಸ್ಟ್ರೇಲಿಯ ಬ್ಯಾಟರ್ ಗಳ ಬ್ಯಾಟಿಂಗ್ ಮಂತ್ರ ತಲೆಕೆಳಗು ಮಾಡುವ ಲೆಕ್ಕಾಚಾರ ಅವರದ್ದು.
ಪ್ರಸಕ್ತ ಟ್ರಾವಿಸ್ ಹೆಡ್ 35 ರನ್ ಹಾಗೂ ಮಾರ್ನಸ್ ಲಾಬುಶೇನ್ 9 ಅವರಿಗೆ ಸಾಥ್ ನೀಡಿ ಕ್ರೀಸ್‌ನಲ್ಲಿದ್ದಾರೆ. ಆಸ್ಟ್ರೇಲಿಯಗೆ ಗೆಲ್ಲಲು 154 ರನ್ ಗಳ ಅವಶ್ಯಕತೆಯಿದೆ.