ನಿಧಾನಗತಿಯಲ್ಲಿ ರನ್ ಗಳಿಸುತ್ತಿರುವ ಆಸ್ಟ್ರೇಲಿಯಾ
ಚೆನ್ನೈ: ಇಲ್ಲಿನ ಚೆಪಾಕ್ ಸ್ಟೇಡಿಯಂನಲ್ಲಿ ಏಕದಿನ ವಿಶ್ವಕಪ್ ಕ್ರಿಕೆಟ್ನ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ನಡೆಯುತ್ತಿರುವ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 102 ರನ್ ಗಳಿಸಿದೆ.
ಈಗಾಗಲೇ ಡೇವಿಡ್ ವಾರ್ನರ್ ಹಾಗೂ ಮಿಷೆಲ್ ಮಾರ್ಷ್ ಅವರ ಪ್ರಮುಖ ವಿಕೆಟ್ ಗಳನ್ನು ಕಳೆದುಕೊಂಡಿದರು ಆಸ್ಟ್ರೇಲಿಯಾ ನಿಧಾನಗತಿಯ ರನ್ ಗಳಿಕೆಗೆ ಪ್ರಾಮುಖ್ಯತೆ ನೀಡಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾಕ್ಕೆ ಫೀಲ್ಡಿಂಗ್ ಬಲ ಪ್ರದರ್ಶಿಸುತ್ತಿರುವ ಭಾರತ ತಂಡ ರನ್ ಗಳಿಕೆಗೆ ಅವಕಾಶ ನೀಡುತ್ತಿಲ್ಲ.
ಚೆನ್ನೈನ ಪಿಚ್ ಮೇಲೆ ಹಿಡಿತ ಸಾಧಿಸುತ್ತಿರುವ ಭಾರತೀಯ ಬೌಲರ್ ಗಳು ಬ್ಯಾಟರ್ಗಳನ್ನು ನಿಯಂತ್ರಣದಲ್ಲಿಟ್ಟುಕೊಂಡಿದ್ದಾರೆ. ಪರಿಣಾಮವಾಗಿ ಆಸ್ಟ್ರೇಲಿಯಾಕ್ಕೆ 100 ರನ್ ಗಳಿಸಲು 24.1 ಓವರ್ಗಳು ಬೇಕಾಯಿತು. ಈಗ 4.09 ರನ್ ರೇಟ್ ಹೊಂದಿರುವ ಆಸ್ಟ್ರೇಲಿಯಾ ಬ್ಯಾಟರ್ ಗಳು ಇವತ್ತು ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡುತ್ತಾರೆಯೇ ಎನ್ನುವ ಕುತೂಹಲ ಕ್ರೀಡಾ ಪ್ರೇಮಿಗಳಲ್ಲಿದೆ.
ಕ್ರಮವಾಗಿ 43, 17 ಗಳಿಸಿ ಸ್ಟೀವ್ ಸ್ಮಿತ್, ಮಾರ್ನುಸ್ ಲಾಬುಶೇನ್ ಕ್ರೀಸ್ ನಲ್ಲಿದ್ದಾರೆ.