ಡೋಪಿಂಗ್ ನಿಯಮ ಉಲ್ಲಂಘನೆ: ಟೆನಿಸ್ ಆಟಗಾರ್ತಿ ಸಿಮೊನಾ ಹಾಲೆಪ್‌ಗೆ 4 ವರ್ಷ ನಿಷೇಧ

Update: 2023-09-13 16:53 GMT

Photo: Twitter/@Simona_Halep

ಲಂಡನ್ : ಎರಡು ಪ್ರತ್ಯೇಕ ಉದ್ದೀಪನ ಮದ್ದು ಸೇವನೆ ನಿಯಮ ಉಲ್ಲಂಘನೆಗೆ ಸಂಬಂಧಿಸಿ ಎರಡು ಬಾರಿ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ವಿಜೇತೆ ಸಿಮೊನಾ ಹಾಲೆಪ್ ಮೇಲೆ ಅಕ್ಟೋಬರ್ 2026ರ ತನಕ ನಾಲ್ಕು ವರ್ಷಗಳ ಕಾಲ ನಿಷೇಧ ಹೇರಲಾಗಿದೆ ಎಂದು ಇಂಟರ್‌ನ್ಯಾಶನಲ್ ಟೆನಿಸ್ ಇಂಟೆಗ್ರಿಟಿ ಏಜೆನ್ಸಿ (ಐಟಿಐಎ) ಮಂಗಳವಾರ ತಿಳಿಸಿದೆ.

ಕಳೆದ ವರ್ಷ ವಿಶ್ವದ ಮಾಜಿ ಅಗ್ರಮಾನ್ಯ ಟೆನಿಸ್ ಆಟಗಾರ್ತಿ ಸಿಮೊನಾ ಹಾಲೆಪ್ ರೊಕ್ಸಾಡುಸ್ಟಾಟ್ ಎಂಬ ನಿಷೇಧಿತ ಮದ್ದು ಸೇವನೆ ಮಾಡಿರುವುದು ಪತ್ತೆಯಾಗಿತ್ತು. ಅತ್ಲೀಟ್ ಬಯಾಲಾಜಿಕಲ್ ಪಾಸ್‌ಪೋರ್ಟ್(ಎಬಿಪಿ)ನಲ್ಲಿ ಆಗಿರುವ ಅಕ್ರಮಗಳಿಗೆ ಸಂಬಂಧಿಸಿ ಈ ಬಾರಿ 31 ವರ್ಷದ ಆಟಗಾರ್ತಿಯ ಮೇಲೆ ಪ್ರತ್ಯೇಕ ಎರಡನೇ ಉಲ್ಲಂಘನೆ ಆರೋಪ ಹೊರಿಸಲಾಗಿದೆ.

ಮಾಜಿ ವಿಂಬಲ್ಡನ್ ಹಾಗೂ ಫ್ರೆಂಚ್ ಓಪನ್ ಚಾಂಪಿಯನ್ ಹಾಲೆಪ್ 2022ರ ಅಕ್ಟೋಬರ್‌ನಿಂದ ತಾತ್ಕಾಲಿವಾಗಿ ನಿಷೇಧ ಎದುರಿಸುತ್ತಿದ್ದಾರೆ. ಈ ಅವಧಿಯೂ ಅವರ 4 ವರ್ಷಗಳ ನಿಷೇಧ ಶಿಕ್ಷೆಗೆ ಸೇರಲಿದೆ. ಹೀಗಾಗಿ ಅವರು 2026ರ ಅಕ್ಟೋಬರ್ 6ರ ತನಕ ಆಡುವಂತಿಲ್ಲ. ಎಬಿಪಿ ಪ್ರಕರಣವನ್ನು ಮೂವರು ಸ್ವತಂತ್ರ ತಜ್ಞರು ಎತ್ತಿ ಹಿಡಿದಿದ್ದಾರೆ.

ನಿಷೇಧ ವಿರುದ್ಧ ರೋಮೆನಿಯಾ ಆಟಗಾರ್ತಿ ಹಾಲೆಪ್‌ಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News