146 ವರ್ಷಗಳಲ್ಲಿ ಇದೇ ಮೊದಲು: ಪಾಕಿಸ್ತಾನಿ ಕ್ರಿಕೆಟಿಗನಿಂದ ವಿಶಿಷ್ಟ ದಾಖಲೆ

Update: 2023-07-27 04:09 GMT

ಕೊಲಂಬೊ: ಅತಿಥೇಯ ಶ್ರೀಲಂಕಾ ವಿರುದ್ಧದ ಸರಣಿಯ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ಬಿಗಿ ಹಿಡಿತ ಸಾಧಿಸಿದ್ದು, ಮೂರನೇ ದಿನದ ಅಂತ್ಯದ ವೇಳೆಗೆ ತನ್ನ ಮೊದಲ ಇನಿಂಗ್ಸ್‍ ನಲ್ಲಿ 5 ವಿಕೆಟ್ ನಷ್ಟಕ್ಕೆ 563 ರನ್‍ಗಳ ಬೃಹತ್ ಮೊತ್ತ ಕಲೆ ಹಾಕಿ 397 ರನ್ ಮುನ್ನಡೆ ಸಾಧಿಸಿದೆ.

ಅಬ್ದುಲ್ಲಾ ಶಫೀಕ್ ಅವರ 201 ರನ್‍ ಗಳು ಮತ್ತು ಸಲ್ಮಾನ್ ಅಲಿ ಅಘಾ ಅವರ ಎರಡನೇ ಟೆಸ್ಟ್ ಶತಕ ದಿನದ ಪ್ರಮುಖ ಆಕರ್ಷಣೆಯಾಗಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಸ್ಟಾರ್ ಬ್ಯಾಟ್ಸ್‍ ಮ ನ್ ಸಾವೂದ್ ಶಕೀಲ್ 57 ರನ್ ಸಿಡಿಸುವ ಮೂಲಕ ವಿಶಿಷ್ಟ ವಿಶ್ವದಾಖಲೆ ಸ್ಥಾಪಿಸಿದರು.

ಏಳನೇ ಟೆಸ್ಟ್ ಪಂದ್ಯ ಆಡುತ್ತಿರುವ 27 ವರ್ಷದ ಆಟಗಾರ ತಮ್ಮ ಆರನೇ ಅರ್ಧಶತಕ ದಾಖಲಿಸಿದರು. ಇದರ ಹೊರತಾಗಿ ಅವರು ಒಂದು ಶತಕ ಹಾಗೂ ದ್ವಿಶತಕ ಸಿಡಿಸಿದ್ದಾರೆ. ಈ ಮೂಲಕ ಪ್ರತಿ ಟೆಸ್ಟ್‍ ನಲ್ಲೂ 50ಕ್ಕಿಂತ ಅಧಿಕ ರನ್ ಗಳಿಸಿದ ಏಕೈಕ ಆಟಗಾರ ಎಂಬ ದಾಖಲೆಗೆ ಪಾತ್ರರಾದರು.

ಸತತ ಆರು ಪಂದ್ಯಗಳಲ್ಲಿ 50ಕ್ಕಿಂತ ಅಧಿಕ ರನ್ ಗಳಿಸಿದ ಸುನೀಲ್ ಗಾವಸ್ಕರ್, ಬಾಸಿಲ್ ಬುಚೆರ್, ಸಯೀದ್ ಅಹ್ಮದ್ ಹಾಗೂ ಬ್ರೆಟ್ ಶಲಿಫ್ ಅವರ ದಾಖಲೆಗಳನ್ನು ಶಕೀಲ್ ಮೀರಿದರು.

ಪಾಕಿಸ್ತಾನದ ಪರ ಆರಂಭಿಕ ಬ್ಯಾಟ್ಸ್‍ ಮನ್ ಅಬ್ದುಲ್ಲಾ ಶಫೀಕ್ ಚೊಚ್ಚಲ ದ್ವಿಶತಕ ಸಿಡಿಸಿದರೆ ಅಘಾ ಸಲ್ಮನ್ ಅಜೇಯ 132 ರನ್ ಗಳಿಸಿ ಪ್ರವಾಸಿ ತಂಡದ ಬೃಹತ್ ಮೊತ್ತಕ್ಕೆ ನೆರವಾದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News