ವಿಶ್ವಕಪ್ ನಲ್ಲಿ ದುರ್ಬಲ ತಂಡಗಳು ಹಾಲಿ ಚಾಂಪಿಯನ್ ಗಳಿಗೆ ಅಚ್ಚರಿ ನೀಡಿದಾಗ

Update: 2023-10-16 13:11 GMT

Photo : PTI 

ಹೊಸದಿಲ್ಲಿ: ರೋಮಾಂಚನ ಅಥವಾ ಅಚ್ಚರಿಯ ಕ್ಷಣಕ್ಕಾಗಿ ಹಾತೊರೆಯುವ ಕ್ರಿಕೆಟ್ ವಿಶ್ವಕಪ್ನಲ್ಲಿ ದಿಲ್ಲಿಯ ಕ್ರೀಡಾಂಗಣವು ರವಿವಾರ ಅಫ್ಘಾನಿಸ್ತಾನವು ಹಾಲಿ ಚಾಂಪಿಯನ್ ಇಂಗ್ಲೆಂಡನ್ನು 69 ರನ್ಗಳಿಂದ ಪರಾಭವಗೊಳಿಸುವ ಮೂಲಕ ನೆನಪಿಡುವಂಥ ಫಲಿತಾಂಶಕ್ಕೆ ಸಾಕ್ಷಿಯಾಯಿತು.

ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡವು ಇನಿಂಗ್ಸ್ನ ಆರಂಭದಿಂದ ಅಂತ್ಯದವರೆಗೂ ಅದ್ಭುತವಾಗಿ ಆಡಿ 49.5 ಓವರ್ಗಳಲ್ಲಿ 284 ರನ್ಗಳನ್ನು ಪೇರಿಸಿತ್ತು. ಪೂರ್ವಾರ್ಧದಲ್ಲಿ ಪಿಚ್ ಬಿಗಿಯನ್ನು ಕಾಯ್ದುಕೊಂಡಿದ್ದು,ಚೆಂಡು ಟರ್ನ್ ತೆಗೆದುಕೊಳ್ಳಲು ಪೂರಕವಾಗಿದ್ದರಿಂದ ಮತ್ತು ವಿಶೇಷವಾಗಿ ಅಫ್ಘಾನಿಸ್ತಾನದ ಸ್ಪಿನ್ನರ್ಗಳ ಅತ್ಯುತ್ತಮ ಪ್ರದರ್ಶನದಿಂದಾಗಿ ಎದುರಾಳಿಯ ಮೊತ್ತ ಜೋಸ್ ಬಟ್ಲರ್ ನೇತೃತ್ವದ ತಂಡಕ್ಕೆ ಸವಾಲಾಗಿ ಕಾಡಿತ್ತು. ಆದರೆ ಅಂತಿಮವಾಗಿ ವಿಜಯಮಾಲೆಯನ್ನು ಧರಿಸಿದ ಅಫ್ಘಾನಿಸ್ತಾನ ತಂಡವು ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ನ ಅದ್ಭುತ ಫಲಿತಾಂಶಗಳ ಪಟ್ಟಿಯಲ್ಲಿ ತನ್ನ ಹೆಸರು ದಾಖಲಿಸುವ ಮೂಲಕ ಇಂಗ್ಲೆಂಡ್ ತಂಡವು ಎದುರಿಸುದ್ದು ಕೇವಲ ಸವಾಲಲ್ಲ,ಅದಕ್ಕೂ ಮಿಗಿಲಾಗಿದ್ದು ಎನ್ನುವುದನ್ನು ಅದಕ್ಕೆ ಮನವರಿಕೆ ಮಾಡಿತ್ತು.

ವಿಶ್ವಕಪ್ ನಲ್ಲಿ ಇದುವರೆಗೆ ಬಂದಿರುವ ಅಚ್ಚರಿಯ ಫಲಿತಾಂಶಗಳು ಇಲ್ಲಿವೆ.

1983: ಭಾರತವು ಬಲಿಷ್ಠ ವೆಸ್ಟ್ ಇಂಡೀಸ್ ಅನ್ನು ಒಂದಲ್ಲ, ಎರಡು ಬಾರಿ ಮುಣ್ಣುಮುಕ್ಕಿಸಿದ್ದಾಗ…

1983ರ ವಿಶ್ವಕಪ್ನಲ್ಲಿ ಭಾರತ ನೆಚ್ಚಿನ ತಂಡಗಳಲ್ಲಿ ಒಂದಾಗಿರಲಿಲ್ಲ, ಅದರ ಸಮೀಪದಲ್ಲಿಯೂ ಇರಲಿಲ್ಲ. ಆದರೆ ಗುಂಪು ಪಂದ್ಯವೊಂದರಲ್ಲಿ ವೆಸ್ಟ್ಇಂಡೀಸ್ನ್ನು ಬಗ್ಗು ಬಡಿಯುವ ಮೂಲಕ ಜಗತ್ತನ್ನು ಬಡಿದೆಬ್ಬಿಸಿತ್ತು ಮತ್ತು ತಂಡದಲ್ಲಿಯ ಪ್ರತಿಭೆಗಳನ್ನು ಗಮನಿಸುವಂತೆ ಮಾಡಿತ್ತು. ಮ್ಯಾಂಚೆಸ್ಟರ್ನಲ್ಲಿ ನಡೆದಿದ್ದ ಪಂದ್ಯದಲ್ಲಿ ಭಾರತದ ವಿಜಯದ ಮೊತ್ತಕ್ಕೆ 89 ರನ್ಗಳನ್ನು ಸೇರಿಸುವ ಮೂಲಕ ಯಶಪಾಲ ಶರ್ಮಾ ಅವರು ಕ್ಲೈವ್ ಲಾಯ್ಡ್ ತಂಡವನ್ನು ಅಚ್ಚರಿಯಲ್ಲಿ ಕೆಡವಿದ್ದರು. ಅದುವರೆಗಿನ ಪಂದ್ಯಾವಳಿಯ ಇತಿಹಾಸದಲ್ಲಿ ಭಾರತದ ಏಕೈಕ ಗೆಲುವು 1975ರಲ್ಲಿ ಪೂರ್ವ ಆಫ್ರಿಕಾದ ವಿರುದ್ಧ ಬಂದಿತ್ತು ಮತ್ತು ಒಂದೇ ಒಂದು ಪಂದ್ಯದಲ್ಲಿ ಸೋಲನ್ನು ಕಾಣದಿದ್ದ ವೆಸ್ಟ್ಇಂಡೀಸ್ ತಂಡವು 1975 ಮತ್ತು 1979ರಲ್ಲಿ ವಿಶ್ವಕಪ್ನ್ನು ಗೆದ್ದುಕೊಂಡಿತ್ತು. ಏಕದಿನ ಪಂದ್ಯದಲ್ಲಿ ವೆಸ್ಟ್ಇಂಡೀಸ್ನ್ನು ಅದರದೇ ನೆಲದಲ್ಲಿ ಸೋಲಿಸುವ ಮೂಲಕ ಭಾರತವು ಪಂದ್ಯಾವಳಿಗೆ ಪ್ರವೇಶ ಪಡೆದಿತ್ತು, ಹಿನ್ನೆಲೆಯಲ್ಲಿ ಇದನ್ನೊಂದು ಮಹತ್ವದ ತಿರುವಿನ ಘಳಿಗೆ ಎಂದೇ ಪರಿಗಣಿಸಲಾಗಿತ್ತು, ಏಕೆಂದರೆ ಭಾರತವು ಈ ರೀತಿಯಲ್ಲಿ ಪಂದ್ಯಾವಳಿಯಲ್ಲಿ ಆರಂಭ ಮಾಡಿದ್ದು ಎಲ್ಲರನ್ನೂ ಬೆರಗುಗೊಳಿಸಿತ್ತು.

ನಂತರ ಲಾರ್ಡ್ಸ್ನಲ್ಲಿಯ ಆ ಪ್ರಸಿದ್ಧ ದಿನವು ಬಂದಿತ್ತು. ಅನೇಕ ಕಥೆಗಳು ಬರೆಯಲ್ಪಟ್ಟಿರುವುದು ಮತ್ತು ಚಲನಚಿತ್ರವೊಂದೂ ನಿರ್ಮಾಣಗೊಂಡಿರುವುದು ಅದನ್ನು ಕ್ರಿಕೆಟ್ ಇತಿಹಾಸದಲ್ಲಿಯ ಅತ್ಯಂತ ಪ್ರಮುಖ ಫಲಿತಾಂಶಗಳಲ್ಲಿ ಒಂದಾಗಿಸಿದೆ. ಕಪಿಲದೇವ್ ನೇತೃತ್ವದ ಭಾರತ ತಂಡವು ವೆಸ್ಟ್ಇಂಡೀಸ್ನ್ನು ದಿಗ್ಭ್ರಾಂತಗೊಳಿಸಿತ್ತು ಮತ್ತು ಇದು ಆಗ ಪಂದ್ಯಾವಳಿಯ ಸಂಕ್ಷಿಪ್ತ ಇತಿಹಾಸದಲ್ಲಿ ವೆಸ್ಟ್ಇಂಡೀಸ್ನ ಕೇವಲ ಎರಡನೇ ಸೋಲು ಆಗಿತ್ತು. ಭಾರತವು ಪೇರಿಸಿದ್ದ 183 ರನ್ಗಳ ಮೊತ್ತ,ಸಾಮೂಹಿಕ ಬೌಲಿಂಗ್ ಪ್ರಯತ್ನ ಮತ್ತು ವಿವಿಯನ್ ರಿಚರ್ಡ್ಸ್ ಅವರನ್ನು ಪೆವಿಲಿಯನ್ಗೆ ಕಳಿಸಲು ಕಪಿಲದೇವ್ ಅವರ ಪ್ರಸಿದ್ಧ ರನ್ನಿಂಗ್ ಕ್ಯಾಚ್ನಿಂದಾಗಿ ವಿಜಯಮಾಲೆ ಧರಿಸಿತ್ತು. ಪಂದ್ಯಾವಳಿಯು ಆರಂಭಗೊಂಡಾಗ ಏನೂ ಆಗಿರದಿದ್ದ ಭಾರತ ತಂಡವು ಚಾಂಪಿಯನ್ ಪಟ್ಟಕ್ಕೇರಿತ್ತು.

ಭಾರತವು ಅದೇ ವರ್ಷದ ಮಾರ್ಚ್ನಲ್ಲಿ ಬೆರ್ಬಿಸ್ನಲ್ಲಿ ಮೊದಲ ಬಾರಿಗೆ ಏಕದಿನ ಕ್ರಿಕೆಟ್ನಲ್ಲಿ ವೆಸ್ಟ್ಇಂಡೀಸ್ನ್ನು ಸೋಲಿಸಿದಾಗಲೇ ಬಹುಶಃ ಇವೆರಡು ಫಲಿತಾಂಶಗಳಿಗೆ ಬೀಜಗಳನ್ನು ಬಿತ್ತಲಾಗಿತ್ತು.

1992:ಚೊಚ್ಚಲ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿದ್ದ ದಕ್ಷಿಣ ಆಫ್ರಿಕಾ

1992ರ ವಿಶ್ವಕಪ್ ಪಂದ್ಯಾವಳಿಯು ದ.ಆಫ್ರಿಕಾದ ಪಾಲಿಗೆ ಅತ್ಯಂತ ವಿಲಕ್ಷಣವಾಗಿ ಅಂತ್ಯಗೊಂಡಿತ್ತು (ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ಮಳೆಯಿಂದ ಬಾಧಿತ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ನಲ್ಲಿ ಸ್ಕೋರ್ಬೋರ್ಡ್ನಲ್ಲಿ ಒಂದು ಬಾಲ್ಗೆ 22 ರನ್ಗಳು ದಾಖಲಾಗಿದ್ದನ್ನು ಯಾರು ಮರೆಯಲು ಸಾಧ್ಯ?). ಆದರೆ ಅದು ಅದ್ಭುತವಾಗಿ ಆರಂಭಗೊಂಡಿತ್ತು. ದಕ್ಷಿಣ ಆಫ್ರಿಕಾ ಎರಡು ದಶಕಗಳ ಬಳಿಕ ಆಗಷ್ಟೇ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಮರಳಿತ್ತು. 1992ರ ವಿಶ್ವಕಪ್ಗೆ ಮುನ್ನ ದಕ್ಷಿಣ ಆಫ್ರಿಕಾ ಕೇವಲ ಮೂರು ಏಕದಿನ ಪಂದ್ಯಗಳನ್ನು ಆಡಿತ್ತು. ಭಾರತದಲ್ಲಿ ನಡೆದಿದ್ದ ಸರಣಿಯಲ್ಲಿ ಎರಡು ಪಂದ್ಯಗಳನ್ನು ಸೋತಿದ್ದ ಅದು ಒಂದು ಪಂದ್ಯವನ್ನು ಗೆದ್ದುಕೊಂಡಿತ್ತು.

ಅಲನ್ ಡೋನಾಲ್ಡ್ ಅವರ 10 ಓವರ್ಗಳಲ್ಲಿ 34ಕ್ಕೆ ಮೂರು ವಿಕೆಟ್ಗಳ ಗಳಿಕೆಯು ಹಾಲಿ ಚಾಂಪಿಯನ್ ಆಗಿದ್ದ ಅಲನ್ ಬಾರ್ಡರ್ ತಂಡವನ್ನು 9 ವಿಕೆಟ್ಗಳಿಗೆ 170 ರನ್ಗಳೊಂದಿಗೆ ಪೆವಿಲಿಯನ್ಗೆ ವಾಪಸ್ ಕಳುಹಿಸಿತ್ತು. ಕೆಪ್ಲರ್ ವೆಸೆಲ್ಸ್ ಅಜೇಯ 81 ರನ್ಗಳೊಂದಿಗೆ ಆಸ್ಟ್ರೇಲಿಯಾದ ಮೊತ್ತವನ್ನು ಬೆನ್ನಟ್ಟಿದ್ದ ದ.ಆಫ್ರಿಕಾದ ಬ್ಯಾಟಿಂಗ್ನ ನೇತೃತ್ವವನ್ನು ವಹಿಸಿದ್ದರು. ಆ ಸೋಲಿನಿಂದ ಚೇತರಿಸಿಕೊಳ್ಳುವುದು ಆಸ್ಟ್ರೇಲಿಯಾಕ್ಕೆ ಸಾಧ್ಯವಾಗಿರಲಿಲ್ಲ. ಸ್ವಂತ ನೆಲದಲ್ಲಿ ನೆಚ್ಚಿನ ತಂಡವಾಗಿ ವಿಶ್ವಕಪ್ ಪಂದ್ಯಾಳಿಯನ್ನು ಪ್ರವೇಶಿಸಿದ್ದ ಅದು ಮುಂದಿನ ಪಂದ್ಯವನ್ನೂ ಸೋತು ಸೆಮಿಫೈನಲ್ ಅವಕಾಶವನ್ನು ಕಳೆದುಕೊಂಡಿತ್ತು.

2023: ಇಂಗ್ಲೆಂಡನ್ನು ಮೀರಿಸಿದ ಅಫ್ಘಾನಿಸ್ತಾನ

ಅಫ್ಘಾನಿಸ್ತಾನ ಪೂರ್ಣ ಸದಸ್ಯರ ತಂಡದ ಎದುರು ವಿಶ್ವಕಪ್ನಲ್ಲಿ ತನ್ನ ಮೊದಲ ಗೆಲುವನ್ನು ಸಾಧಿಸುವ ಮೂಲಕ ಅದ್ಭುತ ಸಾಧನೆಯನ್ನು ಪ್ರದರ್ಶಿಸಿದೆ. ಅದು ಇಂಗ್ಲೆಂಡನ್ನು ಸೋಲಿಸಿದ್ದು ಮಾತ್ರವಲ್ಲ,ಪಂದ್ಯದ ಹೆಚ್ಚಿನ ಭಾಗಗಳಲ್ಲಿ ತನ್ನ ಪ್ರಾಬಲ್ಯವನ್ನು ಮೆರೆದಿತ್ತು. ಪಂದ್ಯಾವಳಿಯ ಇತಿಹಾಸದಲ್ಲಿ ಇದು ಅಫ್ಘಾನಿಸ್ತಾನದ ಕೇವಲ ಎರಡನೇ ವಿಜಯವಾಗಿದೆ. ಅದರ ಹಿಂದಿನ ಗೆಲುವು ಸ್ಕಾಟ್ಲಂಡ್ ವಿರುದ್ಧದ ಪಂದ್ಯದಲ್ಲಿ ಬಂದಿತ್ತು. ರವಿವಾರ ದಿಲ್ಲಿಯಲ್ಲಿ ಉತ್ತಮ ಸಂಖ್ಯೆಯಲ್ಲಿದ್ದ ಪ್ರೇಕ್ಷಕರ ಎದುರು ಅದು ತನ್ನ ಸಂಕ್ಷಿಪ್ತ ಕ್ರಿಕೆಟ್ ಇತಿಹಾಸದಲ್ಲಿಯ ಅತ್ಯಂತ ದೊಡ್ಡ ಗೆಲುವನ್ನು ಸಾಧಿಸಿದೆ. ಇದನ್ನು ಭಾರತದ ಮಾಜಿ ಆರಂಭಿಕ ಆಟಗಾರ ಕೆ.ಶ್ರೀಕಾಂತ್ ಅವರು,‘ನಾನು ಹಿಂದೆಂದೂ ನೋಡಿರದ, ವಿಶ್ವಕಪ್ ಪಂದ್ಯವನ್ನು ಬುಡಮೇಲುಗೊಳಿಸಿದ ಶ್ರೇಷ್ಠ ಗೆಲುವು ’ಎಂದು ಬಣ್ಣಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News