ಆಸ್ಟ್ರೇಲಿಯದ ಪರ ಟಿ20ಯಲ್ಲಿ ಗರಿಷ್ಠ ರನ್: ಫಿಂಚ್ ದಾಖಲೆ ಮುರಿದ ವಾರ್ನರ್

Update: 2024-06-06 16:50 GMT

ಡೇವಿಡ್ ವಾರ್ನರ್ | PC : NDTV 

ಬ್ರಿಡ್ಜ್ಟೌನ್: ಆಸ್ಟ್ರೇಲಿಯದ ಪರ ಟಿ20 ಕ್ರಿಕೆಟ್ ನಲ್ಲಿ ಗರಿಷ್ಠ ರನ್ ಗಳಿಸಿ ತನ್ನ ದಾಖಲೆಯನ್ನು ಮುರಿದಿರುವ ಡೇವಿಡ್ ವಾರ್ನರ್ ರನ್ನು ಮಾಜಿ ನಾಯಕ ಆ್ಯರೊನ್ ಫಿಂಚ್ ಶ್ಲಾಘಿಸಿದರು.

ಒಮಾನ್ ವಿರುದ್ಧ ಗುರುವಾರ ನಡೆದ ಪಂದ್ಯದಲ್ಲಿ ವಾರ್ನರ್ ಅವರು ಫಿಂಚ್ ಅವರ ದಾಖಲೆ(3,120 ರನ್)ಮುರಿದರು.

ತನ್ನ ವಿದಾಯದ ಟಿ20 ವಿಶ್ವಕಪ್ ಆಡುತ್ತಿರುವ ವಾರ್ನರ್ 51 ಎಸೆತಗಳಲ್ಲಿ ಆರು ಬೌಂಡರಿ ಹಾಗೂ ಸಿಕ್ಸರ್ ಗಳ ಸಹಿತ 56 ರನ್ ಗಳಿಸಿದರು. ಆಸ್ಟ್ರೇಲಿಯದ ಪರ 104 ಪಂದ್ಯಗಳನ್ನು ಆಡಿರುವ ವಾರ್ನರ್ 33.92ರ ಸರಾಸರಿಯಲ್ಲಿ 3,155 ರನ್ ಗಳಿಸಿದ್ದಾರೆ. ಟಿ20 ಕ್ರಿಕೆಟ್ ನಲ್ಲಿ ಈ ತನಕ 27 ಅರ್ಧಶತಕ ಹಾಗೂ ಶತಕವನ್ನೂ ಸಿಡಿಸಿದ್ದಾರೆ.

ಮತ್ತೊಂದೆಡೆ ಫಿಂಚ್ ಆಸ್ಟ್ರೇಲಿಯದ ಪರ ಆಡಿರುವ 103 ಪಂದ್ಯಗಳಲ್ಲಿ 19 ಅರ್ಧಶತಕ ಹಾಗೂ 2 ಶತಕಗಳ ಸಹಿತ 3,120 ರನ್ ಗಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News