ಹಾಕಿ ಫೈವ್ಸ್ ಏಶ್ಯಕಪ್: ಪಾಕಿಸ್ತಾನಕ್ಕೆ ಸೋಲುಣಿಸಿ ಪ್ರಶಸ್ತಿ ಗೆದ್ದ ಭಾರತ; ಪ್ರಧಾನಿ ಅಭಿನಂದನೆ

Update: 2023-09-03 15:08 GMT

PHOTO: Twitter \ @chchinni

ಹೊಸದಿಲ್ಲಿ, ಸೆ.3: ಪುರುಷರ ಹಾಕಿ ಫೈವ್ಸ್ ಏಶ್ಯಕಪ್ ಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತ ಗೆಲುವು ಸಾಧಿಸುವುದರೊಂದಿಗೆ ಪ್ರಶಸ್ತಿ ಎತ್ತಿ ಹಿಡಿದಿದೆ.

ಒಮಾನ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ನಿಗದಿತ ಅವಧಿಯಲ್ಲಿ ಉಭಯ ತಂಡಗಳು 4-4ರಿಂದ ಸಮಬಲ ಸಾಧಿಸಿದ್ದವು. ನಂತರ ಪೆನಾಲ್ಟಿ ಶೂಟೌಟ್‌ನಲ್ಲಿ ಪಾಕ್ ತಂಡವನ್ನು ಭಾರತವು 2-0 ಅಂತರದಿಂದ ಸೋಲಿಸಿತು. ಇದರೊಂದಿಗೆ ಭಾರತ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಭಾರತದ ಪರ ಮುಹಮ್ಮದ್ ರಾಹಿಲ್(19ನೇ, 26ನೇ ನಿಮಿಷ), ಜುಗ್‌ರಾಜ್ ಸಿಂಗ್(7ನೇ ನಿ.)ಹಾಗೂ ಮಣಿಂದರ್ ಸಿಂಗ್(10ನೇ ನಿ.)ಗೋಲು ಗಳಿಸಿದ್ದಾರೆ. ಗುರ್ಜೋತ್ ಸಿಂಗ್ ಹಾಗೂ ಮಣಿಂದರ್ ಶೂಟೌಟ್‌ನಲ್ಲಿ ಗೋಲು ಗಳಿಸಿದರು.

ಹಾಕಿ ಫೈವ್ಸ್ ಏಶ್ಯಕಪ್‌ನಲ್ಲಿ ಗೆಲುವು ಸಾಧಿಸಿದ ಭಾರತದ ಪುರುಷರ ಹಾಕಿ ತಂಡಕ್ಕೆ ಅಭಿನಂದನೆಗಳು. ಇದು ನಮ್ಮ ಆಟಗಾರರ ಅಚಲ ಸಮರ್ಪಣೆಗೆ ಸಾಕ್ಷಿಯಾಗಿದೆ. ಈ ಗೆಲುವಿನೊಂದಿಗೆ ಮುಂದಿನ ವರ್ಷ ಒಮಾನ್‌ನಲ್ಲಿ ನಡೆಯುವ ಹಾಕಿ ಫೈವ್ಸ್ ವಿಶ್ವಕಪ್‌ಗೆ ಅರ್ಹತೆ ಪಡೆದಿದ್ದೇವೆ. ಹಾಕಿ ಆಟಗಾರರ ದೃಢತೆ ರಾಷ್ಟ್ರಕ್ಕೆ ಸ್ಫೂರ್ತಿ ನೀಡುತ್ತದೆ ಎಂದು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News