ಭಾರತ – ಬಾಂಗ್ಲಾ ಟೆಸ್ಟ್ | 146 ರನ್ ಗೆ ಆಲೌಟ್ ಆದ ಬಾಂಗ್ಲಾದೇಶ

Update: 2024-10-01 07:13 GMT

Photo : x/@BCCI

ಕಾನ್ಪುರ : ಇಲ್ಲಿನ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ – ಬಾಂಗ್ಲಾ ಟೆಸ್ಟ್ನ ಪಂದ್ಯದಲ್ಲಿ 5ನೇ ದಿನವಾದ ಮಂಗಳವಾರ ಭಾರತ ತಂಡದ ಬಿಗು ದಾಳಿಗೆ ಬಾಂಗ್ಲಾದೇಶವು 146 ರನ್ ಗೆ ಆಲೌಟ್ ಆಗಿದೆ.

ಟೀಮ್ ಇಂಡಿಯಾ ಬೌಲರ್ಗಳಾದ ಆರ್ ಅಶ್ವಿನ್, ರವೀಂದ್ರ ಜಡೇಜಾ, ಜಸ್ಪ್ರೀತ್ ಬೂಮ್ರಾ ತಲಾ 3 ವಿಕೆಟ್ ಪಡೆದರು. ಆಕಾಶ್ ದೀಪ್ ಸಿಂಗ್ 1 ವಿಕೆಟ್ ಪಡೆದರು. ಬಾಂಗ್ಲಾದೇಶದ ಪರ ಮುಶ್ಫಿಕುರ್ ರಹೀಂ ಗರಿಷ್ಠ 37 ರನ್ ಗಳಿಸಿದರು.

2-0 ಅಂತರದಿಂದ ಪಂದ್ಯ ಗೆಲ್ಲಲು ಭಾರತ ತಂಡಕ್ಕೆ ಇನ್ನು 95 ರನ್ ಗಳ ಅವಶ್ಯಕತೆಯಿದೆ.

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News