ಭಾರತಕ್ಕೆ ಈ ಬಾರಿ ವಿಶ್ವಕಪ್ ಜಯಿಸಲು ಸಾಧ್ಯವಾಗದಿದ್ದರೆ…: ರವಿಶಾಸ್ತ್ರಿ ಹೇಳಿದ್ದೇನು?

Update: 2023-11-12 11:35 GMT

ರವಿಶಾಸ್ತ್ರಿ (PTI) 

ಹೊಸದಿಲ್ಲಿ: ಭಾರತ ತಂಡವು ತನ್ನ ಆರಂಭಿಕ ಪಾರಮ್ಯವನ್ನು ಪ್ರಶಸ್ತಿ ಗೆಲ್ಲುವವರೆಗೂ ಮುಂದುವರಿಸಲು ಸಾಧ್ಯವಾಗದಿದ್ದರೆ, ಬಹುಶಃ ಅವರು ಮತ್ತೊಂದು ವಿಶ್ವಕಪ್ ಜಯಿಸಲು ಇನ್ನೂ ಮೂರು ವಿಶ್ವಕಪ್ ಗಳವರೆಗೆ ಕಾಯಬೇಕಾಗಬಹುದು ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ರವಿಶಾಸ್ತ್ರಿ ಎಚ್ಚರಿಸಿದ್ದಾರೆ.

ಭಾರತ ತಂಡದ ಬಹುತೇಕ ಆಟಗಾರರು ತಮ್ಮ ಉಚ್ಛ್ರಾಯ ಸ್ಥಿತಿಯಲ್ಲಿದ್ದು, ಭಾರತವು ಅನುಭವಿಸುತ್ತಿರುವ ವಿಶ್ವಕಪ್ ಪ್ರಶಸ್ತಿ ಬರವನ್ನು ಅಂತ್ಯಗೊಳಿಸುವ ಅವಕಾಶ ಹೊಂದಿದ್ದಾರೆ ಎಂದು Club Prairie Fire Podcastನೊಂದಿಗೆ ಮಾತನಾಡುತ್ತಾ ರವಿಶಾಸ್ತ್ರಿ ಅಭಿಪ್ರಾಯ ಪಟ್ಟಿದ್ದಾರೆ.

ಆ್ಯಡಮ್ ಗಿಲ್ ಕ್ರಿಸ್ಟ್ ಹಾಗೂ ಮೈಕೆಲ್ ವಾನ್ ಕೂಡಾ ಈ ಪಾಡ್ ಕಾಸ್ಟ್ ನ ಭಾಗವಾಗಿದ್ದರು.

“ಭಾರತ ತಂಡವು ಕೊನೆಯದಾಗಿ ವಿಶ‍್ವಕಪ್ ಜಯಿಸಿದ್ದು 12 ವರ್ಷಗಳ ಹಿಂದೆ. ಅದನ್ನು ಮತ್ತೆ ಮಾಡುವ ಅವಕಾಶ ಅವರಿಗಿದೆ. ಅವರು ಆಡುತ್ತಿರುವ ರೀತಿಯನ್ನು ನೋಡಿದರೆ, ಬಹುಶಃ ಇದು ಅವರ ಪಾಲಿಗೆ ಉತ್ತಮ ಅವಕಾಶ” ಎಂದು ರವಿ ಶಾಸ್ತ್ರಿ ಹೇಳಿದ್ದಾರೆ.

“ಅವರೇನಾದರು ಈ ಬಾರಿ ತಪ್ಪಿಸಿಕೊಂಡರೆ, ಮತ್ತೆ ಪ್ರಯತ್ನಿಸುವ ಚಿಂತನೆ ನಡೆಸಲೂ ಬಹುಶಃ ಇನ್ನೂ ಮೂರು ವಿಶ‍್ವಕಪ್ ಗಳವರೆಗೆ ಕಾಯಬೇಕಾಗುತ್ತದೆ. ಈ ತಂಡದಲ್ಲಿನ 7-8 ಆಟಗಾರರು ತಮ್ಮ ಉಚ್ಛ್ರಾಯ ಸ್ಥಿತಿಯಲ್ಲಿದ್ದಾರೆ” ಎಂದು ಅವರು ಪ್ರತಿಪಾದಿಸಿದ್ದಾರೆ.

“ಇದು ಅವರ ಪಾಲಿಗೆ ಕೊನೆಯ ವಿಶ್ವಕಪ್ ಆಗಲಿದೆ. ಅವರು ಆಡುತ್ತಿರುವ ರೀತಿಯನ್ನು ನೋಡಿದರೆ, ಈಗಿನ ಪರಿಸ್ಥಿತಿಯಲ್ಲಿ ಅವರ ಬಳಿ ಗೆಲುವು ಸಾಧಿಸಬಲ್ಲ ತಂಡವಿದೆ” ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News