ಅಮೆರಿಕದ ಜಿಮ್ನಾಸ್ಟ್ ಪಟುವಿನಿಂದ ಕಂಚಿನ ಪದಕ ವಾಪಸ್ ಪಡೆದ ಐಒಸಿ

Update: 2024-08-12 15:41 GMT

 ಜೋರ್ಡಾನ್ ಚಿಲೀಸ್

ಪ್ಯಾರಿಸ್ : ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಅಮೆರಿಕದ ಜಿಮ್ನಾಸ್ಟ್ ಪಟು ಜೋರ್ಡಾನ್ ಚಿಲೀಸ್ ಅವರು ಗೆದ್ದಿದ್ದ ಕಂಚಿನ ಪದಕವನ್ನು ಅಂತರ್ರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ(ಐಒಸಿ)ವಾಪಸ್ ಪಡೆದುಕೊಂಡಿದೆ.

ಕ್ರೀಡಾ ನ್ಯಾಯ ಮಂಡಳಿಯ(ಸಿಎಎಸ್)ತೀರ್ಪಿನ ನಂತರ ರೊಮೇನಿಯದ ಅನಾ ಬರ್ಬೋಸು ಅವರನ್ನು 4ನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಭಡ್ತಿ ನೀಡಲಾಗಿದೆ. ಚಿಲೀಸ್ ಅವರ ಮೂಲಕ ಸ್ಕೋರನ್ನು ಪರಿಗಣಿಸಿ ಐದನೇ ಸ್ಥಾನಕ್ಕೆ ಇಳಿಸಲಾಗಿದೆ.

ಶುಕ್ರವಾರ ನಡೆದಿದ್ದ ಫ್ಲೋರ್ ಎಕ್ಸ್ ಸೈಜ್ ಜಿಮ್ನಾಸ್ಟ್ ನಲ್ಲಿ ಜೋರ್ಡಾನ್ ಚಿಲೀಸ್ ಅವರು ಕಂಚಿನ ಪದಕ ಗೆದ್ದಿದ್ದರು.

ಪಂದ್ಯದ ಫಲಿತಾಂಶದ ವೇಳೆ ಗೊಂದಲವಾಗಿತ್ತು. ಈ ವೇಳೆ ಜೋರ್ಡಾನ್ ಅವರ ಕೋಚ್ ನಿರ್ಣಾಯಕರಿಗೆ ಮನವಿ ಸಲ್ಲಿಸಿದ್ದರು. ಮನವಿ ಮೇರೆಗೆ ಜೋರ್ಡಾನ್ ಚಿಲೀಸ್ ಅವರಿಗೆ ಮೂರನೇ ಸ್ಥಾನ ಘೋಷಣೆ ಮಾಡಲಾಗಿತ್ತು.

ಆದರೆ ಇದರ ವಿರುದ್ಧ ರೊಮೇನಿಯಾದ ಒಲಿಂಪಿಕ್ಸ್ ಸಮಿತಿಯು ಐಒಸಿಯ ಕ್ರೀಡಾ ನ್ಯಾಯ ಮಂಡಳಿಗೆ(ಸಿಎಎಸ್)ದೂರು ಸಲ್ಲಿಸಿತ್ತು.

ಒಲಿಂಪಿಕ್ಸ್ ನಿಯಮಾವಳಿ ಪ್ರಕಾರ ಒಂದು ಬಾರಿ ಮನವಿ ಸಲ್ಲಿಸುವಾಗ ಒಂದು ನಿಮಿಷದಲ್ಲೇ ಸಲ್ಲಿಸಬೇಕು. ಆದರೆ ಜೋರ್ಡಾನ್ ಚಿಲೀಸ್ ಕೋಚ್ ಒಂದು ಬಾರಿ ಮನವಿ ಸಲ್ಲಿಸುವಾಗ ಒಂದು ನಿಮಿಷ, 4 ಸೆಕೆಂಡ್ ಸಮಯ ತೆಗೆದುಕೊಂಡು ಮನವಿ ಸಲ್ಲಿಸಿದ್ದರು. ಹೀಗಾಗಿ ನನಗೆ 3ನೇ ಸ್ಥಾನ ಘೋಷಿಸಿ ಕಂಚಿನ ಪದಕ ನೀಡಬೇಕೆಂದು ಸ್ಪರ್ಧಾಳು ದೂರಿನಲ್ಲಿ ಉಲ್ಲೇಖಿಸಿದ್ದರು.

ಈ ಕುರಿತು ತನಿಖೆ ನಡೆಸಿದ ಸಿಎಎಸ್, ಜೋರ್ಡಾನ್ ಚಿಲೀಸ್ ಅವರಿಗೆ ಕಂಚಿನ ಪದಕ ನೀಡಿದ ನಿರ್ಧಾರವನ್ನು ರದ್ದು ಮಾಡಿದೆ. ಅಲ್ಲದೆ ಜೋರ್ಡಾನ್ ಅವರಿಂದ ಕಂಚಿನ ಪದಕ ವಾಪಸ್ ಪಡೆದಿದೆ.

ಈ ಕುರಿತು ಅಮೆರಿಕ ಒಲಿಂಪಿಕ್ಸ್ ಹಾಗೂ ಪ್ಯಾರಾ ಒಲಿಂಪಿಕ್ಸ್ ಸಮಿತಿಯು ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News