ಇಂಗ್ಲೆಂಡ್ ತಂಡ ಸೇರಿಕೊಂಡ ಜೋಫ್ರಾ ಆರ್ಚರ್
Update: 2023-10-20 20:24 IST

Photo: JofraArcher/Instagram
ಮುಂಬೈ: ಮೊಣಕೈ ಮುರಿತದಿಂದ ಚೇತರಿಸಿಕೊಳ್ಳುತ್ತಿರುವ ವೇಗದ ಬೌಲರ್ ಜೋಫ್ರಾ ಆರ್ಚರ್ ಇದೀಗ ಭಾರತಕ್ಕೆ ಆಗಮಿಸಿದ್ದು ಗುರುವಾರ ವಾಂಖೆಡೆ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡದೊಂದಿಗೆ ಅಭ್ಯಾಸ ನಡೆಸಿದರು.
ಇಂಗ್ಲೆಂಡ್ ತಂಡವು ಆ.21ರಂದು ಮುಂಬೈನಲ್ಲಿ ದಕ್ಷಿಣ ಆಫ್ರಿಕಾ ತಂಡದ ಸವಾಲನ್ನು ಎದುರಿಸಲಿದೆ.
ಆರ್ಚರ್ ನಿನ್ನೆ ಭಾರತಕ್ಕೆ ಆಗಮಿಸಿದ್ದು, ಇಂದು ಅವರು ತಂಡದೊಂದಿಗೆ ಅಭ್ಯಾಸ ನಡೆಸಿದ್ದಾರೆ. ಆದರೆ ಅವರು ಬೌಲಿಂಗ್ ಮಾಡಲಿಲ್ಲ ಎಂದು ಮೂಲಗಳು ತಿಳಿಸಿವೆ.
ಗಾಯದ ಸಮಸ್ಯೆಗೆ ಗುರಿಯಾದ ನಂತರ ಆರ್ಚರ್ ಮಾರ್ಚ್‌ನಿಂದ ಇಂಗ್ಲೆಂಡ್ ಪರ ಯಾವುದೇ ಪಂದ್ಯವನ್ನು ಆಡಿಲ್ಲ. ಇಂಗ್ಲೆಂಡ್‌ನ ಆರು ಪ್ರಮುಖ ವೇಗದ ಬೌಲರ್‌ಗಳಲ್ಲಿ ಒಬ್ಬರು ಗಾಯಗೊಂಡರೆ ಆರ್ಚರ್ ಬದಲಿ ಆಟಗಾರನಾಗಿ ಆಯ್ಕೆಯಾಗಲಿದ್ದಾರೆ.