ಕಲಬುರಗಿ ಐಟಿಎಫ್ ಓಪನ್ ಟೆನಿಸ್ ಟೂರ್ನಿ : ದೇವ್ ಜಾವಿಯಾ ಶುಭಾರಂಭ

Update: 2024-11-19 17:29 GMT

ದೇವ್ ಜಾವಿಯಾ | PC : thehindu

ಕಲಬುರಗಿ : ಪ್ರತಿಷ್ಠಿತ ಕಲಬುರಗಿ ಐಟಿಎಫ್ ಓಪನ್ ಟೆನಿಸ್ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ 7ನೇ ಶ್ರೇಯಾಂಕಿತ ಟೆನಿಸ್ ಆಟಗಾರ ದೇವ್ ಜಾವಿಯಾ ತಮ್ಮ ಮೊದಲ ಪಂದ್ಯದಲ್ಲಿ ಜಯ ಸಾಧಿಸಿ ಶುಭಾರಂಭ ಮಾಡಿದರು.

ಮಂಗಳವಾರ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ನಡೆದ 25,000 ಡಾಲರ್ ಬಹುಮಾನ ಮೊತ್ತದ ಪುರುಷರ ಟೆನಿಸ್ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ದೇವ್ ಜಾವಿಯಾ ವೈಲ್ಡ್ ಕಾರ್ಡ್ ಆಟಗಾರ ಮನೀಶ್ ಗಣೇಶ್ ಅವರನ್ನು 1 ಗಂಟೆ 12 ನಿಮಿಷಗಳ ಹೋರಾಟದಲ್ಲಿ 6-4, 6-3 ಸೆಟ್‌ಗಳ ಅಂತರದಿಂದ ಸೋಲಿಸಿದರು.

2 ತಿಂಗಳ ಅಂತರದಲ್ಲಿ 2 ಸೆಮಿಫೈನಲ್, ಐದು ಕ್ವಾರ್ಟರ್ ಫೈನಲ್ ಆಡಿರುವ 7ನೇ ಶ್ರೇಯಾಂಕದ ಆಟಗಾರ ದೇವ್ ಜಾವಿಯಾ ತಮ್ಮ ಎದುರಾಳಿ ಮನೀಷ್‌ರನ್ನು ಸೋಲಿಸಿ ಮುನ್ನುಗ್ಗಿದರು.

ಕ್ವಾಲಿಫೈಯರ್ ಧೀರಜ್ ಕೊಡಂಚಾ ಶ್ರೀನಿವಾಸನ್ ಕೊರಿಯಾದ ಜಂಗ್ ಯುನ್ಸಿಯೋಕ್ ಗಾಯಗೊಂಡ ಕಾರಣ ಮುಂದಿನ ಸುತ್ತಿಗೆ ಪ್ರವೇಶಿಸಿದರು. ಈ ವೇಳೆ ಶ್ರೀನಿವಾಸ್ 6-0, 3-4 ಅಂತರದಿಂದ ಮುನ್ನಡೆಯಲ್ಲಿದ್ದರು.

►ಮುಂಬೈ ಚಾಂಪಿಯನ್ಸ್ ಪ್ರಜ್ವಲ್- ಆದಿಲ್ ಜೋಡಿಗೆ ಸೋಲು:

ಟೂರ್ನಿಯ ಡಬಲ್ಸ್ ವಿಭಾಗದಲ್ಲಿ ಭರವಸೆ ಮೂಡಿಸಿದ್ದ ಜೋಡಿ ಪ್ರಜ್ವಲ್ ದೇವ್ ಹಾಗೂ ಆದಿಲ್ ಕಲ್ಯಾಣ್‌ಪುರ್ ಅಮೆರಿಕನ್-ಭಾರತೀಯ ಜೋಡಿ ಎದುರು ಸೋಲೊಪ್ಪಿಕೊಂಡಿತು. ಮುಂಬೈನಲ್ಲಿ ಕಳೆದವಾರ ನಡೆದಿದ್ದ ಡಬಲ್ಸ್ ಟೂರ್ನಿಯಲ್ಲಿ 2ನೇ ಶ್ರೇಯಾಂಕದ ಪ್ರಜ್ವಲ್ ದೇವ್ ಹಾಗೂ ಆದಿಲ್ ಕಲ್ಯಾಣ್‌ಪುರ್ ಜೋಡಿ ಅಮೆರಿಕದ ನಿಕ್ ಚಾಪೆಲ್ ಹಾಗೂ ಭಾರತೀಯ ಆಟಗಾರ ನಿತಿನ್ ಕುಮಾರ್ ಸಿನ್ಹಾ ಜೋಡಿ ಎದುರು ಮೊದಲ ಸುತ್ತಿನಲ್ಲಿ 2-6, 6-3 ಹಾಗೂ 3-10 ರ ಅಂತರದಲ್ಲಿ ಸೋತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ದಸ್ತಗೀರ ನದಾಫ್ ಯಳಸಂಗಿ

contributor

Similar News