ಏಕದಿನ ಕ್ರಿಕೆಟ್ | ಕೊಹ್ಲಿ ಬಳಿಕ, 2ನೇ ಅತಿ ವೇಗದಲ್ಲಿ 11 ಸಾವಿರ ರನ್ ಪೂರೈಸಿದ ರೋಹಿತ್ ಶರ್ಮಾ

Update: 2025-02-20 22:08 IST
Virat Kohli , Rohit sharma

 ವಿರಾಟ್ ಕೊಹ್ಲಿ , ರೋಹಿತ್ ಶರ್ಮಾ | PTI

  • whatsapp icon

ದುಬೈ: ‘ಹಿಟ್ ಮ್ಯಾನ್’ಖ್ಯಾತಿಯ ರೋಹಿತ್ ಶರ್ಮಾ ಗುರುವಾರ ಏಕದಿನ ಕ್ರಿಕೆಟ್ ಅಂತರರಾಷ್ಟ್ರೀಯ ಪಂದ್ಯದಲ್ಲಿ ಎರಡನೇ ಅತಿ ವೇಗದಲ್ಲಿ 11,000 ರನ್ ಪೂರೈಸುವ ಮೂಲಕ ಮಹತ್ವದ ಮೈಲಿಗಲ್ಲು ತಲುಪಿದರು.  

ಬಾಂಗ್ಲಾದೇಶ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಪಂದ್ಯದ ವೇಳೆ ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ದಾಖಲೆ ನಿರ್ಮಿಸಿದರು.

ರೋಹಿತ್ ತನ್ನ 261ನೇ ಇನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದರು. ವಿರಾಟ್ ಕೊಹ್ಲಿ 222 ಇನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದರು. ‘ಬ್ಯಾಟಿಂಗ್ ಮಾಂತ್ರಿಕ’ ಸಚಿನ್ ತೆಂಡುಲ್ಕರ್ 276 ಇನಿಂಗ್ಸ್‌ ಗಳಲ್ಲಿ 11 ಸಾವಿರ ರನ್ ಪೂರೈಸಿದ್ದರು.

37ರ ಹರೆಯದ ರೋಹಿತ್‌ ಗೆ ಈ ಸಾಧನೆ ಮಾಡಲು ಇಂದು ಕೇವಲ 12 ರನ್ ಅಗತ್ಯವಿತ್ತು. ಭಾರತ 229 ರನ್ ಚೇಸ್ ಮಾಡುವಾಗ 4ನೇ ಓವರ್‌ ನಲ್ಲಿ ಮುಸ್ತಫಿಝುರ್ರಹ್ಮಾನ್ ಬೌಲಿಂಗ್‌ ನಲ್ಲಿ ಬೌಂಡರಿ ಗಳಿಸಿ ಈ ಸಾಧನೆ ಮಾಡಿದರು.

ರೋಹಿತ್ ಅವರು ಸಚಿನ್, ಕೊಹ್ಲಿ ಹಾಗೂ ಸೌರವ್ ಗಂಗುಲಿಯ ನಂತರ 11 ಸಾವಿರ ರನ್ ಗಳಿಸಿದ ಭಾರತದ 4ನೇ ಹಾಗೂ ವಿಶ್ವದ 10ನೇ ಬ್ಯಾಟರ್ ಎನಿಸಿಕೊಂಡರು.

►ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 11,000 ರನ್ ಗಳಿಸಿದ ಬ್ಯಾಟರ್‌ ಗಳು

222 ಇನಿಂಗ್ಸ್-ವಿರಾಟ್ ಕೊಹ್ಲಿ

261 ಇನಿಂಗ್ಸ್-ರೋಹಿತ್ ಶರ್ಮಾ

276 ಇನಿಂಗ್ಸ್-ಸಚಿನ್ ತೆಂಡುಲ್ಕರ್

286 ಇನಿಂಗ್ಸ್-ರಿಕಿ ಪಾಂಟಿಂಗ್

288- ಸೌರವ್ ಗಂಗುಲಿ

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News