ಪುರುಷರ ಹಾಕಿ: ಇಂದು ಭಾರತಕ್ಕೆ ಬೆಲ್ಜಿಯಮ್ ಎದುರಾಳಿ

Update: 2024-07-31 15:16 GMT

PC : X

ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ, ಈಗಾಗಲೇ ಕ್ವಾರ್ಟರ್‌ಫೈನಲ್ ಗೆ ಅರ್ಹತೆ ಪಡೆದಿರುವ ಭಾರತೀಯ ಹಾಕಿ ತಂಡವು, ಗುರುವಾರ ತನ್ನ ‘ಬಿ’ ಬಣದ ಕೊನೆಯ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬೆಲ್ಜಿಯಮ್ ತಂಡವನ್ನು ಎದುರಿಸಲಿದೆ.

ಬೆಲ್ಜಿಯಮ್ ತಂಡವು ಈಗಾಗಲೇ ‘ಬಿ’ ಬಣದಲ್ಲಿ ಮೂರು ಪಂದ್ಯಗಳಿಂದ ಮೂರು ಗೆಲುವುಗಳನ್ನು ಸಂಪಾದಿಸಿದ್ದು ಅಗ್ರ ಸ್ಥಾನದಲ್ಲಿದೆ. ಈ ಬಣದ ಎರಡನೇ ಸ್ಥಾನದಲ್ಲಿ ಭಾರತವಿದೆ. ಅದು ಎರಡು ಪಂದ್ಯಗಳನ್ನು ಗೆದ್ದು ಒಂದನ್ನು ಡ್ರಾ ಮಾಡಿಕೊಂಡಿದೆ.

ಬಲಿಷ್ಠ ಆಸ್ಟ್ರೇಲಿಯವು ಎರಡು ಜಯ ಮತ್ತು ಒಂದು ಸೋಲಿನೊಂದಿಗೆ ಏಳು ಅಂಕಗಳನ್ನು ಸಂಪಾದಿಸಿದ್ದು ಮೂರನೇ ಸ್ಥಾನದಲ್ಲಿದೆ. ಅರ್ಜೆಂಟೀನ ಒಂದು ಜಯ, ಒಂದು ಡ್ರಾ ಮತ್ತು ಒಂದು ಸೋಲಿನೊಂದಿಗೆ ಮೂರು ಪಂದ್ಯಗಳಿಂದ ನಾಲ್ಕು ಅಂಕಗಳನ್ನು ಪಡೆದಿದ್ದು ಕ್ವಾರ್ಟರ್‌ಫೈನಲ್ ಗೆ ತೇರ್ಗಡೆ ಹೊಂದಿದೆ.

ಅದೇ ವೇಳೆ, ತಲಾ ಮೂರು ಸೋಲುಗಳನ್ನು ಅನುಭವಿಸಿರುವ ನ್ಯೂಝಿಲ್ಯಾಂಡ್ ಮತ್ತು ಐರ್ಲ್ಯಾಂಡ್ ಕೂಟದಿಂದ ಹೊರಬಿದ್ದಿವೆ. ಒಂದು ಬಣದಿಂದ ಅಗ್ರ ನಾಲ್ಕು ತಂಡಗಳು ಕ್ವಾರ್ಟರ್‌ಫೈನಲ್  ಪ್ರವೇಶಿಸಬಹುದಾಗಿದೆ.

ಬೆಲ್ಜಿಯಮ್ ವಿರುದ್ಧದ ಪಂದ್ಯದ ಬಳಿಕ, ಭಾರತವು ತನ್ನ ಕೊನೆಯ ಗುಂಪು ಹಂತದ ಪಂದ್ಯದಲ್ಲಿ ಶುಕ್ರವಾರ ಆಸ್ಟ್ರೇಲಿಯವನ್ನು ಎದುರಿಸಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News