ಕೇವಲ 4 ಪಂದ್ಯಗಳಲ್ಲಿ ಇಂಟರ್ ಮಿಯಾಮಿಯ ಟಾಪ್ ಸ್ಕೋರರ್ ಆದ ಮೆಸ್ಸಿ
Update: 2023-08-07 16:57 GMT
ನ್ಯೂಯಾರ್ಕ್: ತನ್ನ ಹೊಸ ಫುಟ್ಬಾಲ್ ಕ್ಲಬ್ ಇಂಟರ್ ಮಿಯಾಮಿಯಲ್ಲಿ ಕೇವಲ ನಾಲ್ಕು ಪಂದ್ಯಗಳನ್ನಾಡಿರುವ ವಿಶ್ವಕಪ್ ವಿಜೇತ ಹಾಗೂ ಅರ್ಜೆಂಟೀನದ ಲೆಜೆಂಡ್ ಲಿಯೊನೆಲ್ ಮೆಸ್ಸಿ ಪ್ರಸಕ್ತ 2023ರ ಋತುವಿನಲ್ಲಿ ಕ್ಲಬ್ ನ ಟಾಪ್ ಸ್ಕೋರರ್ ಆಗಿ ಹೊರ ಹೊಮ್ಮಿದ್ದಾರೆ.
ರವಿವಾರ ಇಂಟರ್ ಮಿಯಾಮಿ ಪರ ಆಡಿರುವ ತನ್ನ ಮೊದಲ ವಿದೇಶಿ ಪಂದ್ಯದಲ್ಲಿ ಅವಳಿ ಗೋಲು ಗಳಿಸಿದರು. ಆಡಿರುವ 4 ಲೀಗ್ ಕಪ್ ಪಂದ್ಯಗಳಲ್ಲಿ ಮೆಸ್ಸಿ 7 ಗೋಲುಗಳನ್ನು ಗಳಿಸಿದ್ದಾರೆ. ಮಿಯಾಮಿ ಪರ ಆಡಿರುವ ತನ್ನ ಮೊದಲ ಪಂದ್ಯದಲ್ಲಿ ಫ್ರೀ ಕಿಕ್ ನಲ್ಲಿ ಗೋಲು ಗಳಿಸಿದ ಮೆಸ್ಸಿ ಅಟ್ಲಾಂಟಾ ಯುನೈಟೆಡ್ ಹಾಗೂ ಒರ್ಲಾಂಡೊ ಸಿಟಿ ವಿರುದ್ಧದ ಮುಂದಿನ ಎರಡು ಪಂದ್ಯಗಳಲ್ಲಿ ಅವಳಿ ಗೋಲು ಗಳಿಸಿದರು.
ರವಿವಾರ ಡಲ್ಲಾಸ್ ಎಫ್ಸಿ ವಿರುದ್ಧದ ಅಂತಿಮ-16 ಪಂದ್ಯಗಳಲ್ಲಿ ಎರಡು ಗೋಲು ಗಳಿಸಿದರು. ಪಂದ್ಯವು 4-4ರಿಂದ ಸಮಬಲಗೊಂಡ ಕಾರಣ ಪೆನಾಲ್ಟಿಯಲ್ಲಿ ಮಿಯಾಮಿ ಜಯ ಸಾಧಿಸಿ ಕ್ವಾರ್ಟರ್ ಫೈನಲ್ ತಲುಪಿತು.