ಎರಡು ದಶಕಗಳಲ್ಲೇ ಮೊದಲ ಬಾರಿಗೆ ʼಬ್ಯಾಲನ್ ಡಿ'ಓರ್ʼ ನಾಮನಿರ್ದೇಶನ ಪಟ್ಟಿಯಿಂದ ಮೆಸ್ಸಿ, ರೊನಾಲ್ಡೊ ಹೊರಗೆ

Update: 2024-09-05 16:44 GMT

 ರೊನಾಲ್ಡೊ, ಮೆಸ್ಸಿ |  PC : X 

ಹೊಸದಿಲ್ಲಿ: 2024ರ ʼಬ್ಯಾಲನ್ ಡಿ'ಓರ್ʼ ʼಚಿನ್ನದ ಚೆಂಡುʼ ಪ್ರಶಸ್ತಿಗೆ ನಾಮನಿರ್ದೇಶನಗೊಂಡವರ ಪಟ್ಟಿಯನ್ನು ಬುಧವಾರ ಪ್ರಕಟಿಸಲಾಗಿದೆ. ಈ ಪಟ್ಟಿಯಲ್ಲಿ ಈ ಬಾರಿ ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಲಿಯೊನೆಲ್ ಮೆಸ್ಸಿ ಕಾಣಿಸಿಕೊಂಡಿಲ್ಲ. ಹೀಗಾಗುತ್ತಿರುವುದು ಎರಡು ದಶಕಗಳಲ್ಲಿ ಮೊದಲ ಬಾರಿಯಾಗಿದೆ.

ಈ ಬಾರಿಯ ಪಟ್ಟಿಯಲ್ಲಿ ಫ್ರಾನ್ಸ್‌ನ ಕೈಲಿಯಾನ್ ಎಂಬಾಪೆ ಮತ್ತು ನಾರ್ವೆಯ ಅರ್ಲಿಂಗ್ ಹಾಲಂಡ್ ಮುಖ್ಯವಾಗಿ ಕಾಣಿಸಿಕೊಂಡಿದ್ದಾರೆ. ಇಂಗ್ಲೆಂಡ್‌ನ ಜೂಡ್ ಬೆಲಿಂಗ್‌ಹ್ಯಾಮ್, ಸ್ಪೇನ್‌ನ ಲಮಿನ್ ಯಮಲ್ ಮತ್ತು ಸ್ಪೇನ್‌ನವರೇ ಆದ ನಿಕೊ ವಿಲಿಯಮ್ಸ್ ಕೂಡ ಪಟ್ಟಿಯಲ್ಲಿದ್ದಾರೆ. ಸ್ಪೇನ್‌ನ ಈ ಇಬ್ಬರು ಯುವ ಆಟಗಾರರು 2024ರ ಯುರೋಪಿಯನ್ ಚಾಂಪಿಯನ್‌ಶಿಪ್‌ನಲ್ಲಿ ಸ್ಪೇನ್‌ನ ವಿಜಯದಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ಅರ್ಜೆಂಟೀನದ ಲಿಯೊನೆಲ್ ಮೆಸ್ಸಿ ದಾಖಲೆಯ 8 ಬಾರಿ ಈ ಪ್ರಶಸ್ತಿ ಗೆದ್ದಿದ್ದಾರೆ. ಅದೇ ವೇಳೆ, ಪೋರ್ಚುಗಲ್‌ನ ರೊನಾಲ್ಡೊಗೆ 5 ಬಾರಿ ಈ ಪ್ರಶಸ್ತಿ ಒಲಿದಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News