ಶ್ರೀಲಂಕಾ ವಿರುದ್ಧದ ಪಂದ್ಯದ ಶತಕವನ್ನು ಗಾಝಾ ಜನರಿಗೆ ಸಮರ್ಪಿಸಿದ ಮುಹಮ್ಮದ್‌ ರಿಝ್ವಾನ್‌

Update: 2023-10-11 07:41 GMT

ಮುಹಮ್ಮದ್ ರಿಝ್ವಾನ್ (Photo: X/@TheRealPCB)

ಹೈದರಾಬಾದ್:‌ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ತಾವು ಸಿಡಿಸಿದ ಹಾಗೂ ಪಂದ್ಯದ ಗೆಲುವಿಗೆ ಕಾರಣವಾದ ಶತಕವನ್ನು ಪಾಕಿಸ್ತಾನದ ವಿಕೆಟ್‌ ಕೀಪರ್‌ ಬ್ಯಾಟರ್ ಮುಹಮ್ಮದ್‌ ರಿಝ್ವಾನ್‌ ಅವರು ಗಾಝಾದ ಜನರಿಗೆ ಸಮರ್ಪಿಸಿ ಇಸ್ರೇಲ್‌ ದಾಳಿಯಿಂದ ನಲುಗಿರುವ ಅಲ್ಲಿನ ಜನತೆಗೆ ಬೆಂಬಲವಾಗಿ ನಿಂತಿದ್ದಾರೆ.

ಪಾಕಿಸ್ತಾನ ತಂಡದ ಐತಿಹಾಸಿಕ ಗೆಲುವಿಗೆ ಕಾರಣರಾದ ನಂತರ ರಿಝ್ವಾನ್‌ ತಮ್ಮ ಎಕ್ಸ್‌ ಹ್ಯಾಂಡಲ್‌ನಲ್ಲಿ ತಮ್ಮ ಶತಕವನ್ನು ಗಾಝಾ ಜನರಿಗೆ ಸಮರ್ಪಿಸಿದ್ದಾರೆ.

“ಇದು ಗಾಝಾದಲ್ಲಿರುವ ನಮ್ಮ ಸಹೋದರ ಸಹೋದರಿಯರಿಗೆ. ಗೆಲುವಿಗೆ ನನ್ನ ಕೊಡುಗೆ ನೀಡಲು ಸಾಧ್ಯವಾಗಿದ್ದಕ್ಕೆ ಖುಷಿಯಿದೆ. ಇಡೀ ತಂಡ, ಪ್ರಮುಖವಾಗಿ ಅಬ್ದುಲ್ಲಾ ಶಫೀಖ್‌ ಮತ್ತು ಹಸನ್‌ ಅಲಿ ಈ ಗೆಲುವಿನ ರೂವಾರಿಗಳು. ಪಂದ್ಯದುದ್ದಕ್ಕೂ ನಮಗೆ ತೋರಿಸಿದ ಆದರ ಮತ್ತು ಬೆಂಬಲಕ್ಕಾಗಿ ಹೈದರಾಬಾದ್‌ನ ಜನರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ,” ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಒಟ್ಟು 345 ರನ್‌ ಗಳಿಸುವ ದೊಡ್ಡ ಸವಾಲನ್ನೇ ಎದುರಿಸಿದ್ದ ಪಾಕಿಸ್ತಾನ ತನ್ನ ಏಕದಿನ ಪಂದ್ಯದ ಇತಿಹಾಸದಲ್ಲಿಯೇ ಗರಿಷ್ಠ ಸ್ಕೋರ್‌ ಅನ್ನು ಯಶಸ್ವಿಯಾಗಿ ಚೇಸ್‌ ಮಾಡಿ ಗೆಲುವು ಸಾಧಿಸಿದೆ. ರಿಝ್ವಾನ್‌ ಅವರು 131 ರನ್‌ ಗಳಿಸಿದ್ದರೆ ಅಬ್ದುಲ್ಲಾ ಶಫೀಖ್‌ 113 ರನ್‌ ಗಳಿಸಿ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದರು.


Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News