ಯುಎಸ್ ಓಪನ್: ಹಾಲಿ ಚಾಂಪಿಯನ್ ಜೊಕೊವಿಕ್ ಗೆ ಸೋಲು, ಟೂರ್ನಿಯಿಂದ ನಿರ್ಗಮನ

Update: 2024-08-31 06:02 GMT

ನೊವಾಕ್ ಜೊಕೊವಿಕ್ (Photo:X/@usopen)

ನ್ಯೂಯಾರ್ಕ್: ಯುಎಸ್ ಓಪನ್ ಗ್ರ್ಯಾನ್‌ಸ್ಲಾಮ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ಮೂರನೇ ಸುತ್ತಿನಲ್ಲಿ ಹಾಲಿ ಚಾಂಪಿಯನ್, 24 ಬಾರಿಯ ಗ್ರ್ಯಾನ್‌ಸ್ಲಾಮ್ ಚಾಂಪಿಯನ್ ಸರ್ಬಿಯಾದ ನೊವಾಕ್ ಜೊಕೊವಿಕ್ ಗೆ ಆಘಾತಕಾರಿ ಸೋಲನುಭವಿಸಿ ಕೂಟದಿಂದಲೇ ನಿರ್ಗಮಿಸಿದ್ದಾರೆ.

ಎರಡನೇ ಶ್ರೇಯಾಂಕಿತ ಜೊಕೊವಿಕ್ ಅವರು 28ನೇ ಶ್ರೇಯಾಂಕದ ಆಸ್ಟ್ರೇಲಿಯಾದ ಅಲೆಕ್ಸಿ ಪೊಪಿರಿನ್ ವಿರುದ್ಧ 6-4, 6-4, 2-6, 6-4ರ ಅಂತರದಲ್ಲಿ ಸೋಲು ಅನುಭವಿಸಿದ್ದಾರೆ.

ಈ ಸೋಲಿನೊಂದಿಗೆ ವೃತ್ತಿ ಜೀವನದ 25ನೇ ಗ್ರ್ಯಾನ್‌ಸ್ಲಾಮ್ ಹಾಗೂ ಐದನೇ ಯುಎಸ್ ಓಪನ್ ಗೆಲ್ಲುವ ಜೊಕೊವಿಕ್ ಕನಸು ಭಗ್ನಗೊಂಡಿದೆ.

2017ರ ಬಳಿಕ ಮೊದಲ ಬಾರಿಗೆ ಋತುವೊಂದರಲ್ಲಿ (2024) ಒಂದೇ ಒಂದು ಗ್ರ್ಯಾನ್‌ಸ್ಲಾಮ್ ಗೆಲ್ಲುವಲ್ಲಿ ಜೊಕೊವಿಕ್ ವಿಫಲರಾಗಿದ್ದಾರೆ.

ಟೂರ್ನಿಯಲ್ಲಿ ಈಗಾಗಲೇ ಆಘಾತಕಾರಿ ಸೋಲು ಕಂಡಿರುವ ಸ್ಪೇನ್‌ನ ಯುವ ತಾರೆ ಕಾರ್ಲೋಸ್ ಅಲ್ಕರಾಜ್, ಕೂಟದಿಂದಲೇ ಹೊರಬಿದ್ದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News