ವಿಶ್ವಕಪ್ ಪಂದ್ಯದ ಮೊದಲ ರನ್ ಸಿಕ್ಸರ್ ಮೂಲಕ ಗಳಿಸಿದ ಜಾನಿ ಬೇರ್ ಸ್ಟೊ!

Update: 2023-10-07 09:04 GMT

Photo : twitter/ICC

ಅಹಮದಾಬಾದ್: ಇಡೀ ವಿಶ್ವಕಪ್ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ವಿಶ್ವಕಪ್ ಪಂದ್ಯದ ಮೊದಲ ರನ್ ಸಿಕ್ಸರ್ ಮೂಲಕ ಗಳಿಸಿದ ದಾಖಲೆಗೆ ಜಾನಿ ಬೇರ್ ಸ್ಟೊ ಪಾತ್ರರಾಗಿದ್ದಾರೆ. ನ್ಯೂಝಿಲೆಂಡ್ ಹಾಗೂ ಇಂಗ್ಲೆಂಡ್ ನಡುವೆ ಗುರುವಾರ ನಡೆದ ಪಂದ್ಯದಲ್ಲಿ ಟ್ರೆಂಟ್ ಬೌಲ್ಟ್ ಎಸೆದ ಬಾಲ್ ಅನ್ನು ಫೈನ್ ಲೆಗ್ ಗೆ ಸುಲಭವಾಗಿ ಬೌಂಡರಿ ಗೆರೆ ದಾಟಿಸುವ ಮೂಲಕ ಅವರು ಈ ಸಾಧನೆ ಮಾಡಿದರು ಎಂದು ndtv.com ವರದಿ ಮಾಡಿದೆ.

ಆದರೆ, ಜೋ ರೂಟ್ ಸಿಡಿಸಿದ 77 ರನ್ ಹೊರತಾಗಿಯೂ ಮ್ಯಾಟ್ ಹೆನ್ರಿ ನೇತೃತ್ವದ ನ್ಯೂಝಿಲೆಂಡ್ ಬೌಲರ್ ಗಳು ಇಂಗ್ಲೆಂಡ್ ಬ್ಯಾಟರ್ ಗಳನ್ನು 282/9ಕ್ಕೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು. ಅಹಮದಾಬಾದ್ ನ ಜಗತ್ತಿನ ಅತ್ಯಂತ ಬೃಹತ್ ಕ್ರೀಡಾಂಗಣವಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡವು ಟಾಸ್ ಗೆದ್ದು, ಇಂಗ್ಲೆಂಡ್ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿತು. ಗಾಯಾಳುವಾಗಿರುವ ತಾರಾ ಬ್ಯಾಟರ್ ಬೆನ್ ಸ್ಟೋಕ್ಸ್ ಅನುಪಸ್ಥಿತಿಯಲ್ಲಿ ಇಂಗ್ಲೆಂಡ್ ತಂಡ ಅಂಗಳಕ್ಕಿಳಿಯಿತು.

ಆದರೆ, ಜೋ ರೂಟ್ ಅವರ 77 ರನ್ ಹಾಗೂ ನಾಯಕ ಜೋಸ್ ಬಟ್ಲರ್ ಅವರ 43 ರನ್ ಗಳ ನೆರವಿನಿಂದ ಇಂಗ್ಲೆಂಡ್ ತಂಡವು ಒಂಬತ್ತು ವಿಕೆಟ್ ನಷ್ಟಕ್ಕೆ 282 ರನ್ ಗಳಿಸಿತು. ನ್ಯೂಝಿಲೆಂಡ್ ತಂಡದ ಪರ ಟಿಮ್ ಸೌಥಿ ಅನುಪಸ್ಥಿತಿಯಲ್ಲಿ ಹೆನ್ರಿ 48 ರನ್ ನೀಡಿ 3 ವಿಕೆಟ್ ಪಡೆದರೆ, ಸ್ಪಿನ್ನರ್ ಗಳಾದ ಮಿಚೆಲ್ ಸ್ಯಾಂಟ್ನರ್ ಹಾಗೂ ಗ್ಲೆನ್ ಫಿಲಿಪ್ಸ್ ತಲಾ 2 ವಿಕೆಟ್ ಗಳನ್ನು ಕಬಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News