ನೊವಾಕ್ ಜೊಕೊವಿಕ್ ಕೊರಳಿಗೆ ಒಲಿಂಪಿಕ್ಸ್ ಚಿನ್ನ

Update: 2024-08-04 16:26 GMT

ನೊವಾಕ್ ಜೊಕೊವಿಕ್ | PC : skysports.com

ಪ್ಯಾರಿಸ್ : ಸರ್ಬಿಯದ ಟೆನಿಸ್ ಸ್ಟಾರ್ ನೊವಾಕ್ ಜೊಕೊವಿಕ್ ದೀರ್ಘ ಸಮಯದಿಂದ ನಿರೀಕ್ಷಿಸುತ್ತಿದ್ದ ಒಲಿಂಪಿಕ್ಸ್ ಪುರುಷರ ಸಿಂಗಲ್ಸ್ ಚಿನ್ನದ ಪದಕವನ್ನು ಜಯಿಸಿ ಸ್ಮರಣೀಯ ಸಾಧನೆ ಮಾಡಿದ್ದಾರೆ.

ಜೊಕೊವಿಕ್ ರವಿವಾರ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಸ್ಪೇನ್‌ನ ಕಾರ್ಲೊಸ್ ಅಲ್ಕರಾಝ್ ವಿರುದ್ಧ 7-6(3), 7-6(2) ಸೆಟ್‌ಗಳ ಅಂತರದಿಂದ ಜಯ ಸಾಧಿಸಿದರು. ಈ ತನಕ ಗೆಲ್ಲಲು ಸಾಧ್ಯವಾಗದ ಒಲಿಂಪಿಕ್ಸ್ ಚಿನ್ನಕ್ಕೆ ಕೊರಳೊಡ್ಡಿದರು.

37ರ ಹರೆಯದ ಜೊಕೊವಿಕ್ 1988ರ ನಂತರ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿರುವ ಮೊದಲ ಹಿರಿಯ ಟೆನಿಸಿಗ ಎನಿಸಿಕೊಂಡಿದ್ದಾರೆ.

ಜೊಕೊವಿಕ್ ಈ ಹಿಂದೆ ಬೀಜಿಂಗ್, ಲಂಡನ್, ರಿಯೋ ಡಿ ಜನೈರೊ ಹಾಗೂ ಟೋಕಿಯೊದಲ್ಲಿ ನಡೆದಿದ್ದ ಒಲಿಂಪಿಕ್ಸ್‌ ನಲ್ಲಿ ಪದಕ ಗೆಲ್ಲಲು ವಿಫಲರಾಗಿದ್ದರು. ಅಲ್ಕರಾಝ್ ವಿರುದ್ದ ಜಯ ಸಾಧಿಸಿರುವ ಜೊಕೊವಿಕ್ ಐತಿಹಾಸಿಕ ಮೈಲಿಗಲ್ಲು ತಲುಪಿದರು. ಈ ಗೆಲುವಿನೊಂದಿಗೆ ಜೊಕೊವಿಕ್ ಎಲ್ಲ 4 ಗ್ರ್ಯಾನ್‌ಸ್ಲಾಮ್ ಸಿಂಗಲ್ಸ್ ಪ್ರಶಸ್ತಿ ಹಾಗೂ ಒಲಿಂಪಿಕ್ಸ್ ಚಿನ್ನದ ಪದಕ ಗೆದ್ದ ನಾಲ್ವರು ಟೆನಿಸ್ ತಾರೆಯರ ಗುಂಪಿಗೆ ಸೇರಿದ್ದಾರೆ. ಆಂಡ್ರೆ ಅಗಾಸ್ಸಿ, ರಫೆಲ್ ನಡಾಲ್, ಸ್ಟೆಫಿ ಗ್ರಾಫ್ ಹಾಗೂ ಸೆರೆನಾ ವಿಲಿಯಮ್ಸ್ ಅವರು ಎಲ್ಲ 4 ಗ್ರ್ಯಾನ್‌ಸ್ಲಾಮ್ ಟೂರ್ನಿಗಳು ಹಾಗೂ ಒಲಿಂಪಿಕ್ಸ್ ಸಿಂಗಲ್ಸ್ ವಿಭಾಗದಲ್ಲಿ ಚಿನ್ನ ಗೆದ್ದಿರುವ ಸಾಧನೆ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News