ಪ್ರಜ್ಞಾನಂದ ತಾಯಿಯೊಂದಿಗಿದ್ದ ಫೋಟೊ ವೈರಲ್, ಟ್ವಿಟರ್ ನಲ್ಲಿ 3.9 ಮಿಲಿಯನ್ ಜನರಿಂದ ವೀಕ್ಷಣೆ

Update: 2023-08-27 07:04 GMT

Photo: Twitter

ಚೆನ್ನೈ: ಭಾರತದ ಚೆಸ್  ಚತುರ ಆರ್. ಪ್ರಜ್ಞಾನಂದ ಅವರು FIDE ಚೆಸ್ ವಿಶ್ವಕಪ್ಗೆ ಅರ್ಹತೆ ಗಳಿಸಿ ಫೈನಲ್ ನಲ್ಲಿ ವಿಶ್ವದ ನಂ.1 ಆಟಗಾರ  ಮ್ಯಾಗ್ನಸ್ ಕಾರ್ಲ್ಸನ್ ಅವರನ್ನು ಎದುರಿಸುವ ಮೂಲಕ ಇಡೀ ದೇಶದಲ್ಲಿ ಮನೆ ಮಾತಾಗಿದ್ದಾರೆ.

ಪಂದ್ಯಾವಳಿಯ ಉದ್ದಕ್ಕೂ, ಕೇವಲ 18 ವರ್ಷದ ಗ್ರ್ಯಾಂಡ್ಮಾಸ್ಟರ್  ಪ್ರಜ್ಞಾನಂದ ಮಾತ್ರ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯ ಕೇಂದ್ರ ಬಿಂದುವಾಗಿರಲಿಲ್ಲ,ಝರ್ ಬೈಜಾನ್ ಬಾಕುನಲ್ಲಿ ನಡೆದ ಈವೆಂಟ್ಗೆ ಅವರೊಂದಿಗೆ ಬಂದಿದ್ದ ಅವರ ತಾಯಿ ಕೂಡ ಆಕರ್ಷಣೆಯ ಕೇಂದ್ರ ಬಿಂದುವಾದರು. ವಾಸ್ತವವಾಗಿ, ಪ್ರಜ್ಞಾನಂದರ ತಾಯಿಯ ಕೆಲವು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆಅದರಲ್ಲಿ ಒಂದು ಚಿತ್ರ ಈಗಾಗಲೇ ಟ್ವಿಟರ್ನಲ್ಲಿ (ಈಗ X) 3.9 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.

ಚಿತ್ರವನ್ನು ಚೆಸ್ ಛಾಯಾಗ್ರಾಹಕಿ ಮರಿಯಾ ಎಮೆಲಿಯಾನೋವಾ ಕ್ಲಿಕ್ಕಿಸಿದ್ದಾರೆ. ಫೋಟೊವನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿರುವ ಅವರು   "ಲೆಜೆಂಡ್  ಹಾಗೂ  ಅವರ ಮಗನೊಂದಿಗೆ ಸೆಲ್ಫಿ ತೆಗೆದುಕೊಂಡಿರುವೆ" ಎಂದು  ಬರೆದಿದ್ದಾರೆ.

ಈ ಪೋಸ್ಟ್ ಅನ್ನು ಹಂಚಿಕೊಂಡಿರುವ  ಪ್ರಜ್ಞಾನಂದ ಅವರು ಬೆಂಕಿ ಹಾಗೂ ಪ್ರೀತಿಯ ಸಂಕೇತ ಹಾಕಿ ಧನ್ಯವಾದಗಳು ಎಂದು ಬರೆದಿದ್ದಾರೆ.

ಟೈ-ಬ್ರೇಕರ್ನಲ್ಲಿ ಮ್ಯಾಗ್ನಸ್ ಕಾರ್ಲ್ಸೆನ್‌ ವಿರುದ್ದ ಫೈನಲ್ನಲ್ಲಿ ಸೋತಿದ್ದರಿಂದ ಪ್ರ ಜ್ಞಾನಂದ ಅವರು ಪಂದ್ಯಾವಳಿಯಲ್ಲಿ ರನ್ನರ್ಸ್ ಅಪ್ ಆಗಿದ್ದರು.


Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News