ಭಾರತ-ಆಸ್ಟ್ರೇಲಿಯ ಅಭ್ಯಾಸ ಪಂದ್ಯ | ಹರ್ಷಿತ್ ರಾಣಾ ಬೌಲಿಂಗ್ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯ ಪ್ರೈಮ್ ಮಿನಿಸ್ಟರ್ ಇಲೆವೆನ್
Update: 2024-12-01 07:13 GMT
ಕ್ಯಾನ್ ಬೆರಾ: ಭಾರತ ತಂಡದ ವಿರುದ್ಧದ ಪಿಂಕ್ ಬಾಲ್ ಅಭ್ಯಾಸ ಪಂದ್ಯದಲ್ಲಿ ಭಾರತದ ಮಧ್ಯಮ ವೇಗಿ ಹರ್ಷಿತ್ ರಾಣಾರ ಮೊನಚಾದ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯ ತಂಡ, ಇತ್ತೀಚಿನ ವರದಿಗಳ ಪ್ರಕಾರ, 7 ವಿಕೆಟ್ ನಷ್ಟಕ್ಕೆ 195 ರನ್ ಗಳಿಸಿದೆ.
ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮ, ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಬ್ಯಾಟಿಂಗ್ ಗೆ ಆಗಮಿಸಿದ ಆಸ್ಟ್ರೇಲಿಯ ತಂಡಕ್ಕೆ ಮುಹಮ್ಮದ್ ಸಿರಾಜ್ ಆರಂಭಿಕ ಆಘಾತ ನೀಡಿದರು. ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಲು ಸಜ್ಜಾಗಿರುವ ಆರಂಭಿಕ ಬ್ಯಾಟರ್ ಸ್ಯಾಮ್ ಕಾನ್ಸ್ ಟಾಸ್, ಕೇವಲ ಐದು ರನ್ ಗಳಿಸಿದ್ದಾಗ ಮುಹಮ್ಮದ್ ಸಿರಾಜ್ ಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಜೇಡನ್ ಗುಡ್ ವಿನ್ ಕೇವಲ 4 ರನ್ ಗಳಿಸಿ, ಆಕಾಶ್ ದೀಪ್ ಬೌಲಿಂಗ್ ನಲ್ಲಿ ಔಟಾದರು.
ನಂತರ, ಬಿರುಗಾಳಿಯ ಬೌಲಿಂಗ್ ಪ್ರದರ್ಶಿಸಿದ ಮತ್ತೊಬ್ಬ ವೇಗಿ ಹರ್ಷಿತ್ ರಾಣಾ, 4 ವಿಕೆಟ್ ಗಳನ್ನು ಕಿತ್ತು, ಆಸ್ಟ್ರೇಲಿಯ ತಂಡದ ಮಧ್ಯಮ ಕ್ರಮಾಂಕದ ನಡು ಮುರಿದರು.