ಅಭ್ಯಾಸ ಪಂದ್ಯದಲ್ಲಿ ರಿಷಭ್ ಪಂತ್ ಬ್ಯಾಟಿಂಗ್

Update: 2023-08-16 15:51 GMT

Photo : Twitter \ @OYERJALOK

ಹೊಸದಿಲ್ಲಿ: ಭಾರತದ ವಿಕೆಟ್ಕೀಪರ್-ಬ್ಯಾಟರ್ ರಿಷಭ್ ಪಂತ್ ಗಾಯದಿಂದ ಗಣನೀಯ ಚೇತರಿಕೆ ಕಾಣುತ್ತಿದ್ದು, ನೆಟ್ ನಲ್ಲಿ ಬ್ಯಾಟಿಂಗ್ ಜೊತೆಗೆ ಕೀಪಿಂಗ್ ಕೂಡ ಮಾಡುತ್ತಿದ್ದಾರೆ. ಪಂತ್ ಗಾಗಿ ಮಾಡಲಾಗಿರುವ ಬಿಸಿಸಿಐ ಫಿಟ್ನೆಸ್ ಕಾರ್ಯಕ್ರಮವನ್ನು ಪಂತ್ ಸದ್ಯಕ್ಕೆ ಅನುರಿಸುತ್ತಿದ್ದಾರೆ.

ಪಂತ್ ಪ್ರಾಕ್ಟೀಸ್ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವ ವೀಡಿಯೊವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಪಂತ್ ಬ್ಯಾಟಿಂಗ್ ಮಾಡಲು ತೆರಳುತ್ತಿರುವುದು, ನೆರೆದಿದ್ದ ಜನರು ಜೋರಾಗಿ ಕೂಗಿ ಹುರಿದುಂಬಿಸುತ್ತಿರುವುದು ವೀಡಿಯೊದಲ್ಲಿ ಕಂಡುಬಂದಿದೆ. ಪಂತ್ ಕೆಲವೊಂದು ದೊಡ್ಡ ಹೊಡೆತಗಳನ್ನು ಬಾರಿಸಿದರು.

ಡಿಸೆಂಬರ್ ನಲ್ಲಿ ಭೀಕರ ಕಾರು ಅಪಘಾತ ಸಂಭವಿಸಿದ ನಂತರ ಪಂತ್ ಅವರಿಂದ ಟೀಮ್ ಇಂಡಿಯಾ ವಂಚಿತವಾಗಿದೆ.

ಕಾರು ಅಪಘಾತದಲ್ಲಿ ಗಂಭೀರ ಸ್ವರೂಪದ ಗಾಯಕ್ಕೀಡಾಗಿದ್ದ ಪಂತ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಪಂತ್ ಚೇತರಿಕೆಯು ಮುಂದುವರಿದ್ದರೂ ವಿಶ್ವಕಪ್ನಲ್ಲಿ ಭಾಗವಹಿಸುವ ಸಾಧ್ಯತೆ ಕ್ಷೀಣಿಸಿದೆ.

ಪಂತ್ ಅವರು ನೆಟ್ನಲ್ಲಿ ಬ್ಯಾಟಿಂಗ್ ಹಾಗೂ ಕೀಪಿಂಗ್ ಮಾಡಲಾರಂಭಿಸಿದ್ದಾರೆ ಎಂದು ಬಿಸಿಸಿಐ ಇತ್ತೀಚೆಗೆ ಪ್ರಕಟನೆಯೊಂದರಲ್ಲಿ ತಿಳಿಸಿದೆ

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News