ರಣಜಿ ಟ್ರೋಫಿ ಫೈನಲ್ ಪಂದ್ಯ ವೀಕ್ಷಿಸಿದ ರೋಹಿತ್ ಶರ್ಮಾ
ಮುಂಬೈ : ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಮುಂಬೈನ ವಾಂಖೆಡೆ ಸ್ಟೇಡಿಯಮ್ನಲ್ಲಿ ನಡೆಯುತ್ತಿರುವ ಮುಂಬೈ ಹಾಗೂ ವಿದರ್ಭ ನಡುವಿನ ರಣಜಿ ಟ್ರೋಫಿ ಫೈನಲ್ ಪಂದ್ಯವನ್ನು ಮಂಗಳವಾರ ವೀಕ್ಷಿಸಿ ಆನಂದಿಸಿದರು.
ಸ್ಥಳೀಯ ಆಟಗಾರ ರೋಹಿತ್ ಮುಂಬೈನ ಹಿರಿಯ ವೇಗದ ಬೌಲರ್ ಧವಳ್ ಕುಲಕರ್ಣಿ ಜೊತೆಗೆ ಮುಂಬೈನ ಡ್ರೆಸ್ಸಿಂಗ್ ರೂಮ್ನಲ್ಲಿ ಕುಳಿತು ಪಂದ್ಯವನ್ನು ವೀಕ್ಷಿಸುತ್ತಿರುವುದು ಕಂಡುಬಂದಿದೆ.
ಲಿಟಲ್ ಮಾಸ್ಟರ್ ಸಚಿನ್ ತೆಂಡುಲ್ಕರ್, ಮಾಜಿ ಮುಖ್ಯ ಆಯ್ಕೆಗಾರ ದಿಲಿಪ್ ವೆಂಗಿಸರ್ಕಾರ್ ಹಾಗೂ ಕೆಕೆಆರ್ ಮುಖ್ಯ ಕೋಚ್ ಚಂದ್ರಕಾಂತ್ ಪಂಡಿತ್ ಮಂಗಳವಾರ ಮೂರನೇ ದಿನದಾಟವನ್ನು ವೀಕ್ಷಿಸಿ ಆನಂದಿಸಿದರು.
ಭಾರತೀಯ ಕ್ರಿಕೆಟ್ ಮಂಡಳಿ(ಬಿಸಿಸಿಐ)ಟೆಸ್ಟ್ ಹಾಗೂ ದೇಶೀಯ ಕ್ರಿಕೆಟಿಗೆ ಆದ್ಯತೆ ನೀಡಲು ಮುಂದಾಗಿರುವಾಗಲೇ ರೋಹಿತ್ ರಣಜಿ ಪಂದ್ಯವನ್ನು ವೀಕ್ಷಿಸಿದ್ದಾರೆ.
ಫೈನಲ್ ಪಂದ್ಯದ ಎರಡನೇ ದಿನವಾದ ಸೋಮವಾರ ಲೆಜೆಂಡರಿ ಸುನೀಲ್ ಗವಾಸ್ಕರ್ ಹಾಗೂ ಡಯಾನಾ ಎದುಲ್ಜಿ ವೀಕ್ಷಿಸಿದ್ದರು.ʻ
ಬಿಸಿಸಿಐ ಇತ್ತೀಚೆಗೆ ಟೆಸ್ಟ್ ಕ್ರಿಕೆಟ್ ಇನ್ಸೆಂಟಿವ್ ಸ್ಕೀಮ್ ಅನ್ನು ಪರಿಚಯಿಸಿದೆ. ಇದರ ಅಡಿಯಲ್ಲಿ ನಿರ್ದಿಷ್ಟ ಋತುವಿನಲ್ಲಿ 75 ಪ್ರತಿಶತ ಅಥವಾ ಹೆಚ್ಚು ನಿಗದಿತ ಕೆಂಪು ಚೆಂಡಿನ ಆಟಗಳನ್ನು ಆಡುವ ಆಟಗಾರರಿಗೆ ಟೆಸ್ಟ್ ಪಂದ್ಯದ ಬಹುಮಾನವನ್ನು ಮೂರು ಪೆಟ್ಟು ಹೆಚ್ಚಿಸಿದೆ.
Rohit Sharma supporting the Ranji Trophy
— Johns. (@CricCrazyJohns) March 12, 2024
- This is a great message to all the players in Indian cricket. pic.twitter.com/Ij8tsAOiBy