ಸಿಂಗಲ್ಸ್ ರ‍್ಯಾಂಕಿಂಗ್ : ಅಗ್ರ-100 ರೊಳಗೆ ಸ್ಥಾನ ಪಡೆದ ಸುಮಿತ್ ನಾಗಲ್

Update: 2024-02-12 15:52 GMT

ಸುಮಿತ್ ನಾಗಲ್ | Photo: PTI  

ಹೊಸದಿಲ್ಲಿ: 1973ರಲ್ಲಿ ಕಂಪ್ಯೂಟರೀಕೃತ ಎಟಿಪಿ ರ್ಯಾಂಕಿಂಗ್ ಪರಿಚಯಿಸಲ್ಪಟ್ಟ ನಂತರ ಸುಮಿತ್ ನಗಾಲ್ ವರ್ಲ್ಡ್ ಟಾಪ್-100ನೊಳಗೆ ಸ್ಥಾನ ಪಡೆದ ಭಾರತದ 10ನೇ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ನಾಗಲ್ ರವಿವಾರ ನಡೆದ ಚೆನ್ನೈ ಓಪನ್ ಫೈನಲ್ ಪಂದ್ಯದಲಿ ಇಟಲಿಯ ಲುಕಾ ನಾರ್ಡಿ ಅವರನ್ನು 6-1, 6-4 ನೇರ ಸೆಟ್ಗ ಳ ಅಂತರದಿಂದ ಮಣಿಸುವ ಮೂಲಕ ಐದನೇ ಬಾರಿ ಎಟಿಪಿ ಚಾಲೆಂಜರ್ ಟೂರ್ ಪ್ರಶಸ್ತಿಯನ್ನು ಬಾಚಿಕೊಂಡರು. ಇದರ ಫಲವಾಗಿ ಎಟಿಪಿ ರ್ಯಾಂಕಿಂಗ್ ನಲ್ಲಿ 23 ಸ್ಥಾನ ಮೇಲಕ್ಕೇರಿದ ನಾಗಲ್ ಜೀವನಶ್ರೇಷ್ಠ 98ನೇ ರ್ಯಾಂಕ್ ತಲುಪಿದ್ದಾರೆ. ನಾಗಲ್ ಗಿಂತ ಮೊದಲು 2019ರಲ್ಲಿ ಪ್ರಜ್ಞೇಶ್ ಗುಣೇಶ್ವರನ್ ಅಗ್ರ-100ರೊಳಗೆ ಸ್ಥಾನ ಪಡೆದ ಭಾರತದ ಆಟಗಾರನಾಗಿದ್ದರು.

ಡಬ್ಲ್ಯುಟಿಎ ರ್ಯಾಂಕಿಂಗ್ನಲ್ಲಿ ಸಾನಿಯಾ ಮಿರ್ಝಾ ಅಗ್ರ-100ರಲ್ಲಿ ಸ್ಥಾನ ಪಡೆದಿರುವ ಭಾರತದ ಏಕೈಕ ಆಟಗಾರ್ತಿಯಾಗಿದ್ದಾರೆ. ಸಾನಿಯಾ 2007ರಲ್ಲಿ 27ನೇ ಸ್ಥಾನ ತಲುಪಿ ಜೀವನಶ್ರೇಷ್ಠ ಸಾಧನೆ ಮಾಡಿದ್ದರು.

ವೃತ್ತಿಜೀವನದಲ್ಲಿ ಅಗ್ರ-100ರೊಳಗೆ ಸ್ಥಾನ ಪಡೆದ ಭಾರತೀಯ ಟೆನಿಸಿಗರ ಸಂಪೂರ್ಣ ಪಟ್ಟಿ ಇಂತಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News