ಸ್ಪ್ಯಾನಿಶ್ ಫೆಡರೇಷನ್ ಹಾಕಿ ಟೂರ್ನಿ: ಭಾರತದ ವನಿತೆಯರಿಗೆ ಪ್ರಶಸ್ತಿ

Update: 2023-07-31 04:12 GMT

ಬಾರ್ಸಿಲೋನಾ: ಅತಿಥೇಯ ಸ್ಪೇನ್ ತಂಡದ ವಿರುದ್ಧ ಫೈನಲ್ ಪಂದ್ಯದಲ್ಲಿ 3-0 ಗೋಲುಗಳ ಅಧಿಕಾರಯುತ ಗೆಲುವು ಸಾಧಿಸಿದ ಭಾರತದ ಮಹಿಳಾ ಹಾಕಿ ತಂಡ ಸ್ಪ್ಯಾನಿಶ್ ಹಾಕಿ ಫೆಡರೇಷನ್‍ನ 100ನೇ ವರ್ಷಾಚರಣೆ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದೆ.

ವಂದನಾ ಕಟಾರಿಯಾ (22ನೇ ನಿಮಿಷ), ಮೋನಿಕಾ (48ನೇ ನಿಮಿಷ) ಮತ್ತು ಉದಿತಾ (58ನೇ ನಿಮಿಷ) ಭಾರತದ ಪರವಾಗಿ ಗೋಲು ಗಳಿಸಿದರು. ಇದರಿಂದಾಗಿ ಭಾರತ ತಂಡ ಟೂರ್ನಿಯಲ್ಲಿ ಅಜೇಯವಾಗಿ ಪ್ರಶಸ್ತಿ ಗಳಿಸಿದಂತಾಗಿದೆ.

ಶನಿವಾರ ಇಂಗ್ಲೆಂಡ್ ವಿರುದ್ಧದ ಪಂದ್ಯದ ಯಶಸ್ಸಿನಿಂದ ಉತ್ತೇಜನ ಪಡೆದ ಭಾರತ ತಂಡ 3-0 ಅಂತರದ ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಭದ್ರಪಡಿಸಿಕೊಂಡರು. ಮೊದಲಾರ್ಧದಲ್ಲೇ ಭಾರತ ವನಿತೆಯರು ಆಕ್ರಮಣಕಾರಿ ಆಟಕ್ಕೆ ಇಳಿದರು. ಆದಾಗ್ಯೂ ಎಚ್ಚರಿಕೆಯಿಂದ ಆರಂಭಿಸಿ, ಪಂದ್ಯದುದ್ದಕ್ಕೂ ಶಿಸ್ತುಬದ್ಧ ಪ್ರದರ್ಶನ ನೀಡಿ ಗಮನ ಸೆಳೆದರು.

ಮೊದಲಾರ್ಧದ ಕೊನೆಯ ಐದು ನಿಮಿಷಗಳಲ್ಲಿ ಸ್ಪೇನ್ ಕೆಲ ಉತ್ತಮ ಅವಕಾಶಗಳನ್ನು ಸೃಷ್ಟಿಸಿದರೂ, ಭಾರತದ ನಾಯಕಿ ಹಾಗೂ ಗೋಲ್‍ಕೀಪರ್ ಸವಿತಾ ಅತ್ಯುತ್ತಮ ಪ್ರದರ್ಶನದ ಮೂಲಕ ಎದುರಾಳಿ ತಂಡಕ್ಕೆ ನಿರಾಸೆ ಮಾಡಿದರು. ದ್ವಿತೀಯಾರ್ಧದಲ್ಲೂ ಭಾರತ ಪ್ರಭಾವಿ ಪ್ರದರ್ಶನ ಮುಂದುವರಿಸಿತು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News