ಲಂಕಾ ಕ್ರಿಕೆಟ್ ಮಂಡಳಿ ವಜಾ ಆದೇಶ ಹಿಂದಕ್ಕೆ ಪಡೆದ ಕ್ರೀಡಾ ಸಚಿವ
Update: 2023-12-12 16:59 GMT
ಕೊಲಂಬೊ: ಶ್ರೀಲಂಕಾ ಕ್ರಿಕೆಟ್ ಮಂಡಳಿಯನ್ನು ವಜಾಗೊಳಿಸುವ ತನ್ನ ಆದೇಶವನ್ನು ದೇಶದ ನೂತನ ಕ್ರೀಡಾ ಸಚಿವ ಹರಿನ್ ಫೆರ್ನಾಂಡೊ ಮಂಗಳವಾರ ಹಿಂದಕ್ಕೆ ಪಡೆದುಕೊಂಡಿದ್ದಾರೆ.
ಕ್ರಿಕೆಟ್ ಮಂಡಳಿಯು ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆರೋಪಿಸಿ ಹಿಂದಿನ ಕ್ರೀಡಾ ಸಚಿವ ರೋಶನ್ ರಣಸಿಂಘೆ ಕ್ರಿಕೆಟ್ ಮಂಡಳಿಯನ್ನು ವಜಾಗೊಳಿಸಿದ್ದರು. ಈಗ ದ್ವೀಪ ರಾಷ್ಟ್ರದ ಕ್ರಿಕೆಟ್ ಮಂಡಳಿಯ ಮೇಲೆ ಅಂತರ್ರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ವಿಧಿಸಿರುವ ಅಮಾನತನ್ನು ತೆರವುಗೊಳಿಸುವ ದೃಷ್ಟಿಯಿಂದ ನೂತನ ಕ್ರೀಡಾ ಸಚಿರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.
“ಶ್ರೀಲಂಕಾ ಕ್ರಿಕೆಟ್ನ ವ್ಯವಹಾರಗಳನ್ನು ನೋಡಿಕೊಳ್ಳಲು ಮಧ್ಯಂತರ ಸಮಿತಿಯೊಂದನ್ನು ನೇಮಿಸುವ ನಿರ್ಧಾರವನ್ನು ಹಿಂದಕ್ಕೆ ಪಡೆಯುವ ಗಝೆಟ್ಗೆ ನಾನು ಸಹಿ ಹಾಕಿದ್ದೇನೆ. ಕ್ರಿಕೆಟ್ ಮಂಡಳಿಯ ಮೇಲೆ ಐಸಿಸಿ ವಿಧಿಸಿರುವ ಅಮಾನತನ್ನು ತೆರವುಗೊಳಿಸುವ ಉದ್ದೇಶದಿಂದ ಹೀಗೆ ಮಾಡಲಾಗಿದೆ’’ ಎಂದು ಹರಿನ್ ಫೆರ್ನಾಂಡೊ ಸಾಮಾಜಿಕ ಮಾಧ್ಯಮ x ನಲ್ಲಿ ಬರೆದಿದ್ದಾರೆ.