ನನ್ನ ಜೀವಕ್ಕೆ ಅಪಾಯವಿದೆ ಎಂದ ಶ್ರೀಲಂಕಾ ಕ್ರೀಡಾ ಸಚಿವ ರೋಶನ್ ರಣಸಿಂಘ
ಕೊಲಂಬೊ, ನ.27: ಕ್ರಿಕೆಟ್ ಆಡಳಿತ ಮಂಡಳಿಯಲ್ಲಿನ ಭ್ರಷ್ಟಾಚಾರವನ್ನು ಬಹಿರಂಗಪಡಿಸಿದ ಕಾರಣಕ್ಕೆ ನನ್ನ ಜೀವಕ್ಕೆ ಅಪಾಯವಿದೆ. ನನಗೆ ಏನಾದರೂ ಆದರೆ ಅದಕ್ಕೆ ಅಧ್ಯಕ್ಷ ರಾನಿಲ್ ವಿಕ್ರಮಸಿಂಘ ಹಾಗೂ ಅವರ ಸಲಹೆಗಾರನೇ ಹೊಣೆಯಾಗುತ್ತಾರೆ ಎಂದು ಶ್ರೀಲಂಕಾದ ಕ್ರೀಡಾ ಸಚಿವ ರೋಶನ್ ರಣಸಿಂಘ ಹೇಳಿದ್ದಾರೆ. ಸಂಸತ್ತಿನಲ್ಲಿ ಮಾತನಾಡಿದ ರಣಸಿಂಫ್, ರಾಜಕೀಯ ದ್ವೇಷಕ್ಕಾಗಿ ನನ್ನಮೇಲೆ ವಿಕ್ರಮಸಿಂಘ ಅವರು ಹಗೆತನ ಸಾಧಿಸುತ್ತಿದ್ದಾರೆ. ನನ್ನ ಜೀವ ಅಪಾಯದಲ್ಲಿದ್ದು, ಇಂದು ಹಾಗೂ ನಾಳೆ ನನ್ನ ಕೊಲೆಯಾಗಬಹುದು ಎಂದರು. ನನ್ನ ಮೇಲೆ ಸುಳ್ಳು ಆರೋಪ ಹೊರಿಸಲು ತೆರಿಗೆ ವಂಚನೆ ಪ್ರಕರಣದಲ್ಲಿ ವಿದೇಶದಿಂದ ತರಿಸಿಕೊಂಡಿದ್ದ ನನ್ನ ವಾಹನವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕ್ರಿಕೆಟ್ ನಲ್ಲಿ ಭ್ರಷ್ಟಾಚಾರವನ್ನು ಎ ಎತ್ತಿ ತೋರಿಸಿದ್ದಕ್ಕಾಗಿ ಇದು ನನಗೆ ಸಿಕ್ಕ ಬಹುಮಾನವೇ? ಲೆಕ್ಕ ಪರಿಶೋಧನೆ ವರದಿ ಆಧಾರದ ಮೇಲೆ ಶ್ರೀಲಂಕಾ ಕ್ರಿಕೆಟ್ ಮಂಡಳಿಯನ್ನು ವಜಾಗೊಳಿಸಿ, ಮಧ್ಯಂತರ ಸಮಿತಿ ರಚನೆ ಮಾಡಿದ್ದೆ ನನ್ನ ಮೇಲೆ ಅಧ್ಯಕ್ಷರು ರಾಜಕೀಯ ಹಗೆತನ ಸಾಧಿಸುತ್ತಿರುವುದು ಏಕೆ? ಎಂದು ಅವರು ಪ್ರಶ್ನಿಸಿದರು.
ರೋಶನ್ ರಣಸಿಂಫ್ ವಜಾ
ಕ್ರಿಕೆಟ್ ಮಂಡಳಿಯಲ್ಲಿನ ಭ್ರಷ್ಟಾಚಾರವನ್ನು ತೊಡೆದುಹಾಕಲು ನಾನು ಇಟ್ಟಿರುವ ಹೆಜ್ಜೆಯಿಂದಾಗಿ ಅಧ್ಯಕ್ಷ ರಾನಿಲ್ ವಿಕ್ರಮ ಸಿಂಫ್ ನನ್ನನ್ನು ಹತ್ಯೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿರುವ ಕೆಲವೇ ಗಂಟೆಗಳ ನಂತರ ಸೋಮವಾರ ಶ್ರೀಲಂಕಾದ ಕ್ರೀಡಾ ಸಚಿವ ರೋಶನ್ ರಣಸಿಂಘ ಅವರನ್ನು ವಜಾಗೊಳಿಸಲಾಗಿದೆ. ಒಂದು ವೇಳೆ ರಸ್ತೆಯಲ್ಲೇ ನನ್ನ ಹತ್ಯೆಯಾದರೆ ವಿಕ್ರಮ ಸಿಂಘ ಹಾಗೂ ಅವರ ಸಿಬ್ಬಂದಿಯ ಮುಖ್ಯಸ್ಥರು ಹೊಣೆಯಾಗುತ್ತಾರೆ ಎಂದು ಸಂಸತ್ತಿನಲ್ಲಿ ರೋಶನ್ ಹೇಳಿದ ನಂತರ ರೋಶನ್ ರನ್ನು ವಜಾಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.