ಟೆನಿಸ್: ಸುಮಿತ್ ನಾಗಲ್, ಅಂಕಿತಾ ರೈನಾ ಕ್ವಾರ್ಟರ್ ಫೈನಲ್‌ಗೆ

Update: 2023-09-26 15:33 GMT

Photo- PTI

ಹಾಂಗ್‌ಝೌ : ಭಾರತದ ಆಟಗಾರ ಸುಮಿತ್ ನಗಾಲ್ ಹಾಗೂ ಅಂಕಿತಾ ರೈನಾ ಏಶ್ಯನ್ ಗೇಮ್ಸ್‌ನಲ್ಲಿ ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.

ಮಂಗಳವಾರ ನಡೆದ ಪುರುಷರ ಸಿಂಗಲ್ಸ್‌ನ 3ನೇ ಸುತ್ತಿನ ಪಂದ್ಯದಲ್ಲಿ ನಗಾಲ್ ಅವರು ಬೀಬಿಟ್ ಝುಕಾಯೆವ್‌ರನ್ನು 7-6(9), 6-4 ಸೆಟ್‌ಗಳ ಅಂತರದಿಂದ ಮಣಿಸಿದರು.

ಒಂದು ಗಂಟೆ, 34 ನಿಮಿಷಗಳ ಕಾಲ ನಡೆದ ಮಹಿಳೆಯರ ಸಿಂಗಲ್ಸ್ ಸ್ಪರ್ಧೆಯಲ್ಲಿ ಅಂಕಿತಾ ರೈನಾ ಮೂರನೇ ಸುತ್ತಿನಲ್ಲಿ ಹಾಂಕಾಂಗ್‌ನ ತನ್ನ ಎದುರಾಳಿ ಆದಿತ್ಯಾ ಪಿ.ಕರುಣರತ್ನೆ ಅವರನ್ನು 6-1, 6-2 ಅಂತರದಿಂದ ಸೋಲಿಸಿದರು. 2018ರ ಆವೃತ್ತಿಯಲ್ಲಿ ಕಂಚಿನ ಪದಕ ವಿಜೇತೆ 198ನೇ ರ್ಯಾಂಕಿನ ಆಟಗಾರ್ತಿ ಅಂಕಿತಾ ಕ್ವಾರ್ಟರ್ ಫೈನಲ್‌ನಲ್ಲಿ ಜಪಾನ್‌ನ ಹರುಕಾರನ್ನು ಎದುರಿಸಲಿದ್ದಾರೆ.

ನಾಗಲ್ ಹಾಗೂ ರೈನಾ ಕ್ವಾರ್ಟರ್ ಫೈನಲ್‌ಗೆ ತಲುಪುವ ಮೂಲಕ ಗೇಮ್ಸ್‌ನಲ್ಲಿ ಸಿಂಗಲ್ಸ್ ವಿಭಾಗದಲ್ಲಿ ಪದಕ ಗೆಲ್ಲುವುದರಿಂದ ಒಂದು ಹೆಜ್ಜೆ ಹಿಂದಿದ್ದಾರೆ. ಟೆನಿಸ್ ಸ್ಪರ್ಧೆಯಲ್ಲಿ ಸೆಮಿ ಫೈನಲ್ ತಲುಪುವ ಆಟಗಾರರು ಕಂಚಿನ ಪದಕ ಗೆಲ್ಲುವುದು ಖಾತ್ರಿಯಾಗಿದೆ.

ರಾಮಕುಮಾರ್ ರಾಮನಾಥನ್ ಹಾಗೂ ಋತುರಾಜ್ ಬೋಂಸ್ಲೆ ಅವರ ಏಶ್ಯನ್ ಗೇಮ್ಸ್ ಪಯಣವು ಅಂತ್ಯವಾಗಿದೆ. 

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News