ಟಿ20 ವಿಶ್ವಕಪ್‍ಗೆ ಉಗ್ರರ ಬೆದರಿಕೆ: ಐಸಿಸಿ ಹೇಳಿದ್ದೇನು?

Update: 2024-05-06 08:06 GMT

Photo credit: icc-cricket.com

ವಾಷಿಂಗ್ಟನ್: ಜೂನ್ 9ರಿಂದ ಆರಂಭವಾಗುವ ಟಿ20 ವಿಶ್ವಕಪ್‍ಗೆ ಉತ್ತರ ಪಾಕಿಸ್ತಾನದ ಉಗ್ರರ ಬೆದರಿಕೆ ಕರೆಯನ್ನು ಸ್ವೀಕರಿಸಿರುವುದಾಗಿ ಕ್ರಿಕೆಟ್ ವೆಸ್ಟ್ ಇಂಡೀಸ್ ಬಹಿರಂಗಪಡಿಸಿದೆ. ಆದರೆ ಈ ಬೃಹತ್ ಕೂಟವನ್ನು ವ್ಯವಸ್ಥಿತವಾಗಿ ನಡೆಸಲು ಎಲ್ಲ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಐಸಿಸಿ ಸ್ಪಷ್ಟಪಡಿಸಿದೆ.

"ಪಂದ್ಯಗಳನ್ನು ಆಯೋಜಿಸುವ ದೇಶ ಹಾಗೂ ನಗರಗಳ ಅಧಿಕಾರಿಗಳ ಜತೆ ನಾವು ನಿಕಟ ಸಂಪರ್ಕದಲ್ಲಿದ್ದೇವೆ. ನಮ್ಮ ಪಂದ್ಯಾವಳಿಗೆ ಯಾವುದೇ ಅಪಾಯವಾಗದಂತೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದ್ದೇವೆ" ಎಂದು ಐಸಿಸಿ ಹೇಳಿದೆ.

"ಪಂದ್ಯಾವಳಿಯ ಎಲ್ಲ ಹಕ್ಕುದಾರರ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಲು ನಾವು ಬದ್ಧರಾಗಿದ್ದೇವೆ. ಇದು ನಮ್ಮ ನಂಬರ್ ವನ್ ಆದ್ಯತೆ. ಸಮಗ್ರ ಹಾಗೂ ಆಕರ್ಷಕ ಭದ್ರತಾ ಯೋಜನೆ ಜಾರಿಗೊಳಿಸಲಾಗುತ್ತಿದೆ" ಎಂದು ಸ್ಪಷ್ಟಪಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News