ಬಿಗ್ ಬ್ಯಾಶ್ ಲೀಗ್ ಪಂದ್ಯದಲ್ಲಿ ಭಾಗವಹಿಸಲು ಹೆಲಿಕಾಪ್ಟರ್ ನಲ್ಲಿ ಮೈದಾನಕ್ಕೆ ಬಂದಿಳಿದ ವಾರ್ನರ್!
ಮೆಲ್ಬರ್ನ್: ಅಬ್ಬರದ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ ಬಿಗ್ ಬ್ಯಾಶ್ ಲೀಗ್(ಬಿಬಿಎಲ್)ನಲ್ಲಿ ಸಿಡ್ನಿ ಥಂಡರ್ ಪರ ಆಡಲು ಶನಿವಾರ ಹೆಲಿಕಾಪ್ಟರ್ ನಲ್ಲಿ ಪ್ರತಿಷ್ಠಿತ ಸಿಡ್ನಿ ಕ್ರಿಕೆಟ್ ಮೈದಾನಕ್ಕೆ ಬಂದಿಳಿದರು.
ಹಂಟರ್ವ್ಯಾಲಿಯಲ್ಲಿ ತನ್ನ ಸಹೋದರನ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದ 37ರ ವಯಸ್ಸಿನ ವಾರ್ನರ್ ಎಸ್ಸಿಜಿಯ ಔಟ್ ಫೀಲ್ಡ್ ಗೆ ಹೆಲಿಕಾಪ್ಟರ್ ನಲ್ಲಿ ಬಂದಿಳಿದರು.
ವಾರ್ನರ್ ಅವರು ಕಳೆದ ವಾರ ತನ್ನ ತವರು ಪ್ರೇಕ್ಷಕರ ಸಮ್ಮುಖದಲ್ಲಿ ಎಸ್ಸಿಜಿಯಲ್ಲಿ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಿದ್ದರು. ಪಾಕಿಸ್ತಾನ ವಿರುದ್ಧ ಅರ್ಧಶತಕ ಗಳಿಸುವ ಮೂಲಕ ಮೂರನೇ ಟೆಸ್ಟ್ ನಲ್ಲಿ ಆಸ್ಟ್ರೇಲಿಯಕ್ಕೆ ಸುಲಭ ಗೆಲುವು ತಂದುಕೊಟ್ಟಿದ್ದರು.
ಏಕದಿನ ಕ್ರಿಕೆಟ್ ನಿಂದ ಅಧಿಕೃತವಾಗಿ ನಿವೃತ್ತಿ ಪ್ರಕಟಿಸಿರುವ ವಾರ್ನರ್ ವಿಶ್ವದಾದ್ಯಂತದ ಟಿ-20 ಹಾಗೂ ವಿವಿಧ ಟಿ-20 ಲೀಗ್ಗಳಲ್ಲಿ ಆಡಲಿದ್ದಾರೆ. ಇತ್ತೀಚೆಗೆ ಸಿಡ್ನಿ ಥಂಡರ್ ಪರ ಎರಡು ವರ್ಷಗಳ ಅವಧಿಯ ಒಪ್ಪಂದಕ್ಕೆ ಸಹಿ ಹಾಕಿದ್ದರು.
ಸಿಡ್ನಿ ಥಂಡರ್ ಶುಕ್ರವಾರ ಸಿಡ್ನಿ ಸಿಕ್ಸರ್ ತಂಡವನ್ನು ಎದುರಿಸಲಿದೆ.