ವಿಂಬಲ್ಡನ್ ಟೆನಿಸ್ ಚಾಂಪಿಯನ್ ಶಿಪ್ | ಸಿನಿಯಾಕೋವಾ ಜೊತೆ ಮಹಿಳೆಯರ ಡಬಲ್ಸ್ ಕಿರೀಟ ಗೆದ್ದ ಅಮೆರಿಕದ ಟೌನ್ಸೆಂಡ್

Update: 2024-07-14 15:14 GMT

 ಸಿನಿಯಾಕೋವಾ , ಟೌನ್ಸೆಂಡ್ | PC : PTI 

ಲಂಡನ್: ಅಮೆರಿಕದ ಟೇಲರ್ ಟೌನ್ಸೆಂಡ್ ಝೆಕ್ ಗಣರಾಜ್ಯದ ಕಟೆರಿನಾ ಸಿನಿಯಾಕೋವಾರೊಂದಿಗೆ ಶನಿವಾರ ವಿಂಬಲ್ಡನ್ ಮಹಿಳೆಯರ ಡಬಲ್ಸ್ ಫೈನಲ್ನಲ್ಲಿ ಜಯ ಸಾಧಿಸಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಟೌನ್ಸೆಂಡ್ ಹಾಗೂ ಸಿನಿಯಾಕೋವಾ ಕೆನಡಾದ ಗ್ಯಾಬ್ರಿಯೆಲಾ ಡಾಬ್ರೋವ್ಸ್ಕಿ ಹಾಗೂ ನ್ಯೂಝಿಲ್ಯಾಂಡ್ನ ಎರಿನ್ ರೌಟ್ಲಿಫ್ರನ್ನು 7-6(5), 7-6(1) ಸೆಟ್ಗಳ ಅಂತರದಿಂದ ಮಣಿಸಿದರು.

ಟೌನ್ಸೆಂಡ್ 2022ರಲ್ಲಿ ಯು.ಎಸ್. ಓಪನ್ ಡಬಲ್ಸ್ ಫೈನಲ್ನಲ್ಲಿ ಹಾಗೂ ಕಳೆದ ವರ್ಷದ ಫ್ರೆಂಚ್ ಓಪನ್ ಡಬಲ್ಸ್ ಫೈನಲ್ನಲ್ಲಿ ಸೋತಿದ್ದರು. ಸಿನಿಯಾಕೋವಾ ಜೊತೆ ಮೂರನೇ ಬಾರಿ ಫೈನಲ್ನಲ್ಲಿ ಆಡಿದ ಟೌನ್ಸೆಂಡ್ ಕೊನೆಗೂ ಪ್ರಶಸ್ತಿ ಗೆದ್ದರು.

28ರ ಹರೆಯದ ಚಿಕಾಗೊ ಸಂಜಾತೆ ಟೌನ್ಸೆಂಡ್ ಪ್ರಶಸ್ತಿ ಗೆದ್ದ ನಂತರ ಭಾವುಕರಾದರು.

ಎರಿನ್ ರೌಟ್ಲಿಫ್ ಕಳೆದ ವರ್ಷ ಡಾಬ್ರೋವ್ಸ್ಕಿ ಜೊತೆಗೂಡಿ ಯು.ಎಸ್.ಓಪನ್ ಡಬಲ್ಸ್ ಪ್ರಶಸ್ತಿ ಗೆದ್ದುಕೊಂಡಿದ್ದರು. ಮಹಿಳೆಯರ ಡಬಲ್ಸ್ ರ್ಯಾಂಕಿಂಗ್ನಲ್ಲಿ ನಂ.1 ಸ್ಥಾನವನ್ನು ತಲುಪುವ ಮೂಲಕ ಸಮಾಧಾನಪಟ್ಟಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News