ಅಮೆರಿಕನ್ ಓಪನ್ | ಝ್ವೆರೆವ್, ಡಿಮಿಟ್ರೋವ್ ಕ್ವಾರ್ಟರ್ ಫೈನಲ್‌ಗೆ

Update: 2024-09-02 15:25 GMT

ನ್ಯೂಯಾರ್ಕ್ : ಮಾಜಿ ರನ್ನರ್-ಅಪ್ ಅಲೆಕ್ಸಾಂಡರ್ ಝ್ವೆರೆವ್ ನಾಲ್ಕನೇ ಬಾರಿ ಯು.ಎಸ್. ಓಪನ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್ರ ಫೈನಲ್‌ಗೆ ತಲುಪಿದ್ದಾರೆ. ಅಂತಿಮ-8ರ ಹಂತದಲ್ಲಿ ಟೇಲರ್ ಫ್ರಿಟ್ಝ್ ವಿರುದ್ಧ ಸೆಣಸಾಡಲಿದ್ದಾರೆ.

ಜರ್ಮನಿಯ 4ನೇ ಶ್ರೇಯಾಂಕದ ಝ್ವೆರೆವ್ ರವಿವಾರ ನಡೆದ ಪುರುಷರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಮೆರಿಕದ ಬ್ರೆಂಡನ್ ನಕಾಶಿಮಾ ವಿರುದ್ಧ 3-6, 6-1, 6-2, 6-2 ಸೆಟ್‌ಗಳ ಅಂತರದಿಂದ ಜಯ ಸಾಧಿಸಿದರು. ಈ ಮೂಲಕ ವೃತ್ತಿಜೀವನದಲ್ಲಿ 450ನೇ ಗೆಲುವು ದಾಖಲಿಸಿದರು.

2020ರಲ್ಲಿ ಯು.ಎಸ್. ಓಪನ್ ಫೈನಲ್‌ಗೆ ತಲುಪಿದ್ದ ಝ್ವೆರೆವ್ ಅವರು ಡೊಮಿನಿಕ್ ಥೀಮ್ ವಿರುದ್ಧ ಸೋತು ರನ್ನರ್ಸ್ ಅಪ್‌ಗೆ ತೃಪ್ತಿಪಟ್ಟಿದ್ದರು.

ಝ್ವೆರೆವ್ ಅಂತಿಮ-8ರ ಸುತ್ತಿನಲ್ಲಿ ಅಮೆರಿಕದ 12ನೇ ಶ್ರೇಯಾಂಕದ ಫ್ರಿಟ್ಝ್ ರನ್ನು ಎದುರಸಲಿದ್ದಾರೆ. ಜುಲೈನಲ್ಲಿ ನಡೆದಿದ್ದ ವಿಂಬಲ್ಡನ್ ಚಾಂಪಿಯನ್‌ಶಿಪ್‌ನ 4ನೇ ಸುತ್ತಿನ ಪಂದ್ಯದಲ್ಲಿ 2 ಸೆಟ್‌ಗಳ ಹಿನ್ನಡೆಯ ಬಳಿಕ ಫ್ರಿಟ್ಝ್ ಜಯಭೇರಿ ಬಾರಿಸಿದ್ದರು. ನಾನು ಮಂಡಿನೋವಿನ ಕಾರಣಕ್ಕೆ ಒಂದೇ ಕಾಲಿನಲ್ಲಿ ನಿಂತು ಆಡಿ ಆ ಪಂದ್ಯವನ್ನು ಮುಗಿಸಿದ್ದೆ ಎಂದು ಝ್ವೆರೆವ್ ಹೇಳಿದ್ದಾರೆ.

ಈ ವರ್ಷದ ಫ್ರೆಂಚ್ ಓಪನ್ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಝ್ವೆರೆವ್ ಸ್ಪೇನ್‌ನ ಕಾರ್ಲೊಸ್ ಅಲ್ಕರಾಝ್ ವಿರುದ್ಧ ಐದು ಸೆಟ್‌ಗಳ ಅಂತರದಿಂದ ಸೋತಿದ್ದರು. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News