ಬಂಗಲೆ ಮಾರಾಟ ವಿರೋಧಿಸಿದ್ದ ಸುಪ್ರೀಂಕೋರ್ಟ್ ವಕೀಲೆಯನ್ನು ಹತ್ಯೆಗೈದ ಪತಿ: ಪೊಲೀಸರು

Update: 2023-09-11 09:32 GMT

Photo: Twitter@NDTV

ಹೊಸದಿಲ್ಲಿ: ನೋಯ್ಡಾ ಬಂಗಲೆಯಲ್ಲಿ 61 ವರ್ಷದ ವಕೀಲರನ್ನು ಕೊಲೆ ಮಾಡಿದ ಆರೋಪದ ಮೇಲೆ ಕೊಲೆಯಾದ ಮಹಿಳೆಯ ಪತಿಯನ್ನು ಬಂಧಿಸಲಾಗಿದೆ. ಇದೀಗ ಬಂಧನಕ್ಕೊಳಗಾಗಿರುವ ನಿತಿನ್ ನಾಥ್ ಸಿನ್ಹಾ ಬಂಗಲೆಯ ಸ್ಟೋರ್ ರೂಂನಲ್ಲಿ 36 ಗಂಟೆಗಳಿಗೂ ಹೆಚ್ಚು ಕಾಲ ಅಡಗಿಕೊಂಡಿದ್ದ ಎಂದು ವರದಿಯಾಗಿದೆ, ಪೊಲೀಸರು ಆತನ ಫೋನ್ ಅನ್ನು ಟ್ರ್ಯಾಕ್ ಮಾಡಿ ಆತನನ್ನು ಹಿಡಿದಿದ್ದಾರೆ.

ಸುಪ್ರೀಂ ಕೋರ್ಟ್ ವಕೀಲೆ ರೇಣು ಸಿನ್ಹಾ ಅವರ ಮೃತದೇಹ ನೋಯ್ಡಾ ಸೆಕ್ಟರ್ 30 ರಲ್ಲಿ ಅವರ ಬಂಗಲೆಯ ಸ್ನಾನಗೃಹದಲ್ಲಿ ಶನಿವಾರ ಪತ್ತೆಯಾಗಿತ್ತು. ಅವರ ಮಗ ವಿದೇಶದಲ್ಲಿ ವಾಸಿಸುತ್ತಿದ್ದು ರೇಣು ಸಿನ್ಹಾ ತನ್ನ ಪತಿಯೊಂದಿಗೆ ಬಂಗಲೆಯಲ್ಲಿ ವಾಸವಾಗಿದ್ದರು.

ಎರಡು ದಿನಗಳಿಂದ ತಾನು ಕರೆ ಮಾಡಿದರೂ ಉತ್ತರಿಸದ ಹಿನ್ನೆಲೆಯಲ್ಲಿ ವಕೀಲರ ಸಹೋದರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಂಗಲೆ ತಲುಪಿದ ಪೊಲೀಸರಿಗೆ ಮಹಿಳೆಯ ಶವ ಪತ್ತೆಯಾಗಿದೆ. ಮಹಿಳೆಯ ಪತಿ ಕಾಣೆಯಾಗಿದ್ದರು.

ಪೊಲೀಸರು ಸಿನ್ಹಾ ಅವರ ಫೋನ್ ಅನ್ನು ಟ್ರ್ಯಾಕ್ ಮಾಡಿದ್ದರು. ಕೊನೆಯ ಸ್ಥಳ ಅವರ ಬಂಗಲೆಯಾಗಿತ್ತು. ನಂತರ ಆತ ಸ್ಟೋರ್ ರೂಂನಲ್ಲಿ ಅಡಗಿಕೊಂಡಿದ್ದನ್ನು ಕಂಡು ಹಿಡಿದು ಬಂಧಿಸಿದ್ದಾರೆ.

ಬಂಗಲೆಯನ್ನು ಮಾರಾಟ ಮಾಡುವ ವಿಚಾರದಲ್ಲಿ ದಂಪತಿಯ ನಡುವಿನ ಭಿನ್ನಾಭಿಪ್ರಾಯವೇ ವಕೀಲರ ಹತ್ಯೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News