ಬೋಟಿನೊಳಗೆ ಬಿದ್ದು ವ್ಯಕ್ತಿ ಮೃತ್ಯು
Update: 2025-03-20 21:30 IST

ಮಲ್ಪೆ, ಮಾ.20: ಮಲ್ಪೆ ಬಂದರಿನಲ್ಲಿ ಮೀನುಗಾರಿಕಾ ಬೋಟೊಂದರಲ್ಲಿ ಕಲಾಸಿಯಾಗಿ ಕಾರ್ಯ ನಿರ್ವಹಿಸುತಿದ್ದ ಬ್ರಹ್ಮಾವರದ ನರಸಿಂಹ (62) ಎಂಬವರು ಮಾ.19ರಂದು ನವೀನ್ ಎಂಬವರ ಮಾಲಕತ್ವದ ವೀರಾಂಜನೇಯ ಪರ್ಸಿನ್ ಬೋಟಿನಲ್ಲಿ ಕೆಲಸ ಮಾಡುತಿದ್ದಾಗ ಬೆಳಗ್ಗೆ 6:30ರ ಸುಮಾರಿಗೆ ಆಯತಪ್ಪಿ ಬೋಟಿನ ಒಳಗೆ ಬಿದ್ದು ಅಸ್ವಸ್ಥಗೊಂಡಿದ್ದು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದಾರೆ. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.