ಮಲ್ಪೆ ಘಟನೆ: ಜನವಾದಿ ಮಹಿಳಾ ಸಂಘಟನೆ ಖಂಡನೆ

Update: 2025-03-20 21:32 IST
ಮಲ್ಪೆ ಘಟನೆ: ಜನವಾದಿ ಮಹಿಳಾ ಸಂಘಟನೆ ಖಂಡನೆ
  • whatsapp icon

ಉಡುಪಿ, ಮಾ.20: ಮಲ್ಪೆ ಬಂದರಿನಲ್ಲಿ ಮೀನುಗಾರ ಮಹಿಳೆಯ ಮೇಲೆ ಕಳ್ಳತನದ ಆರೋಪ ಹೊರಿಸಿ ಆಕೆಯನ್ನು ಮರಕ್ಕೆ ಕಟ್ಟಿಹಾಕಿ ಸಾರ್ವಜನಿಕವಾಗಿ ಶಿಕ್ಷಿಸಿದ್ದು ಅತ್ಯಂತ ಖಂಡನಾರ್ಹ. ಈ ಘಟನೆಗೆ ಕಾರಣ ರಾದವರನ್ನು ಬಂಧಿಸಿರುವ ಪೋಲೀಸ್ ಇಲಾಖೆ, ಈ ಬಗ್ಗೆ ಸಮಗ್ರ ತನಿಖೆಯನ್ನು ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಉಡುಪಿ ಜಿಲ್ಲಾ ಸಮಿತಿ ಒತ್ತಾಯಿಸಿದೆ.

ಮಹಿಳೆ ಎಂಬ ಕಾರಣಕ್ಕೆ ಸಾರ್ವಜನಿಕವಾಗಿ ಹಲ್ಲೆ ಮಾಡುವ, ಬೆತ್ತಲೆ ಗೊಳಿಸುವ, ಆ ಹೆಸರಿನಲ್ಲಿ ಮೈಮು ಟ್ಟುವ, ಲೈಂಗಿಕ ಕಿರುಕುಳ ನೀಡುವ ಪ್ರಕರಣಗಳು ರಾಜ್ಯವ್ಯಾಪಿ ಹೆಚ್ಚುತ್ತಿರುವುದು ಅತ್ಯಂತ ಕಳವಳಕಾರಿ ವಿದ್ಯಮಾನ. ಕಾನೂನನ್ನು ಕೈಗೆತ್ತಿಕೊಳ್ಳುವ ಪ್ರವೃತ್ತಿಗಳು ಹೆಚ್ಚುತ್ತಿವೆ. ಈ ಘಟನೆಗಳನ್ನು ಗಂಭೀರವಾಗಿ ಪರಿಗಣಿಸದಿದ್ದಲ್ಲಿ ಮತ್ತಷ್ಡು ಅರಾಜಕತೆ ಹೆಚ್ಚಾಗುತ್ತದೆ. ಈ ಪ್ರಕರಣ ಕುರಿತಂತೆ ಮಹಿಳಾ ಪರವೆಂದು ಬೊಬ್ಬಿಡುವ ಸ್ಥಳೀಯ ಶಾಸಕರಾಗಲಿ, ಸಂಸದರಾಗಲಿ ಮಾತನಾಡದಿರುವುದು ಅವರ ದುಡಿ ಯುವ ಜನರ, ಬಡವರ, ಮಹಿಳೆಯರ ಕುರಿತ ನಿಷ್ಕಾಳಜಿಯನ್ನು ತೋರುತ್ತದೆ ಎಂದು ಸಮಿತಿ ಹೇಳಿಕೆಯಲ್ಲಿ ತಿಳಿಸಿದೆ.

ದಲಿತ ಹಕ್ಕುಗಳ ಸಮಿತಿ ಖಂಡನೆ: ಮಲ್ಪೆ ಬಂದರಿನಲ್ಲಿ ಪರಿಶಿಷ್ಟ ಜಾತಿಯ ಲಂಬಾಣಿ ಸಮುದಾಯದ ಮಹಿಳೆಯೊಬ್ಬರನ್ನು ಸಾರ್ವಜನಿಕವಾಗಿ ಮರಕ್ಕೆ ಕಟ್ಟಿಹಾಕಿ ಥಳಿಸಿದ ಘಟನೆಯನ್ನು ದಲಿತ ಹಕ್ಕುಗಳ ಸಮಿತಿಯ ಉಡುಪಿ ಜಿಲ್ಲಾ ಸಮಿತಿ ಖಂಡಿಸಿದೆ. ಹಲ್ಲೆ ನಡೆಸಿದವರ ವಿರುದ್ಧ ಪೊಲೀಸ್ ಇಲಾಖೆ ಹಾಗೂ ಸರಕಾರ ಕಠಿಣ ಕಾನೂನು ಕ್ರಮಕೈಗೊಂಡು ನ್ಯಾಯಾಲಯದಲ್ಲಿ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ಸಮಿತಿ ಒತ್ತಾಯಿಸಿದೆ.

ಈ ಘಟನೆ ದೇಶಮಟ್ಟದಲ್ಲಿ ಚರ್ಚೆಯಲ್ಲಿರುವಾಗ ಉಡುಪಿ ಶಾಸಕರಾಗಲೀ, ಸಂಸದರಾಗಲೀ ಮಾತನಾ ಡದಿರುವುದು ವಿಪರ್ಯಾಸ ಎಂದು ಸಮಿತಿಯ ಉಡುಪಿ ಇಜಲ್ಲಾ ಸಂಚಾಲಕ ಸಂಜೀವ ಬಳ್ಕೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News