ಬಸ್ರೂರು: ಬಿಎಚ್ ಮೊಹಮ್ಮದ್ ಅನ್ಸಾರ್ ನಿಧನ
Update: 2025-03-20 22:14 IST

ಉಡುಪಿ: ಜಿಲ್ಲೆಯ ಬಸ್ರೂರು ನಿವಾಸಿ ಬಿಎಚ್ ಮೊಹಮ್ಮದ್ ಅನ್ಸಾರ್ (63) ಅವರು ಅಲ್ಪಕಾಲದ ಅನಾರೋಗ್ಯದಿಂದ ಗುರುವಾರ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ನಿಧನರಾದರು.
ದುಬೈಯಲ್ಲಿ ಸುದೀರ್ಘ ಕಾಲ ಉದ್ಯೋಗ, ಉದ್ಯಮ ಕ್ಷೇತ್ರದಲ್ಲಿದ್ದ ಅವರು ಇತ್ತೀಚೆಗೆ ಊರಿಗೆ ಮರಳಿದ್ದರು.
ಸರಳ, ಸಜ್ಜನ, ಪರೋಪಕಾರಿಯಾಗಿದ್ದ ಮೊಹಮ್ಮದ್ ಅನ್ಸಾರ್ ಅವರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು ಹಾಗು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯ ಸಂಸ್ಕಾರ ನಾಳೆ ಜುಮಾ ನಮಾಝ್ ಬಳಿಕ ಬಸ್ರೂರು ಜುಮಾ ಮಸೀದಿಯ ವಠಾರದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲ ತಿಳಿಸಿದೆ.