ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಸಮಸ್ಯೆ ಸರಿಪಡಿಸಲು ಮನವಿ
Update: 2025-04-12 20:41 IST

ಉಡುಪಿ, ಎ.12: ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಯನ್ನು ಸರಿಪಡಿಸುವಂತೆ ಆಗ್ರಹಿಸಿ ಉಡುಪಿ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಶನ್ ವತಿಯಿಂದ ಶುಕ್ರವಾರ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಅವರಿಗೆ ಮನವಿ ಸಲ್ಲಿಸಲಾಯಿತು.
ಉಡುಪಿ ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ಕಾನೂನಾತ್ಮಕವಾಗಿ ಕಟ್ಟಡ ನಿರ್ಮಿಸಲು ಮತ್ತು ಇನ್ನಿತರ ವೈಜ್ಞಾನಿಕ ರೀತಿಯ ತೊಡಕುಗಳಿಂದ ಇಂಜಿನಿಯರ್ಸ್ ಹಾಗೂ ನಾಗರಿಕರು ತೊಂದರೆ ಅನುಭವಿಸುತ್ತಿ ದ್ದಾರೆ. ಈ ತೊಂದರೆಗಳನ್ನು ನಿವಾರಿಸಿ ಪ್ರಾಧಿಕಾರದಿಂದ ಉತ್ತಮ ಸೇವೆ ನೀಡುವಂತೆ ಸಂಸ್ಥೆಯ ಅಧ್ಯಕ್ಷ ಕೆ.ರಂಜನ್ ಮನವಿ ಮಾಡಿದರು.
ಅಹವಾಲನ್ನು ಆಲಿಸಿದ ಅಧ್ಯಕ್ಷರು ಉತ್ತಮ ಪ್ರತಿಕ್ರಿಯೆ ವ್ಯಕ್ತ ಪಡಿಸಿ ಮುಂದೆ ಉಡುಪಿಯ ಇಂಜಿನಿಯರ್ಸ್ ಮತ್ತು ನಾಗರಿಕರಿಗೆ ಕೆಲಸಗಳು ಸುಗಮವಾಗಿ ಮಾಡಿ ಕೊಡುವಂತೆ ಅಧಿಕಾರಿಗಳಿಗೆ ತಾಕಿತ್ತು ಮಾಡಿ, ಇಲಾಖೆಯ ಬೆಂಬಲ ನೀಡಲು ಶ್ರಮಿಸಿಸುದಾಗಿ ಭರವಸೆ ನೀಡಿದರು.