ಪಿಲಿ ನಲಿಕೆ -2024: ಗೋರಕ್ಷನಾಥ ಟೈಗರ್ಸ್ ತಂಡಕ್ಕೆ ಪ್ರಥಮ ಪ್ರಶಸ್ತಿ

Update: 2024-10-13 15:36 GMT

ಮಂಗಳೂರು: ಪಿಲಿ ನಲಿಕೆ ಪ್ರತಿಷ್ಠಾನದ ವತಿಯಿಂದ ನಗರದ ಕರಾವಳಿ ಉತ್ಸವ ಮೈದಾನದಲ್ಲಿ ನಡೆದ 9ನೇ ವರ್ಷದ ಪಿಲಿ ನಲಿಕೆ ಹುಲಿ ವೇಷ ಕುಣಿತ ಸ್ಪರ್ಧೆಯಲ್ಲಿ ಗೋರಕ್ಷನಾಥ ಟೈಗರ್ಸ್ ಜೆಪ್ಪು ತಂಡ ಪ್ರಥಮ ಪ್ರಶಸ್ತಿ ಪಡೆಯಿತು.

ಪುರಲ್ದಪ್ಪೆನ ಮೋಕೆದ ಬೊಳ್ಳಿಲು ಪೊಳಲಿ ಟೈಗರ್ಸ್ ತಂಡ ದ್ವಿತೀಯ ಪ್ರಶಸ್ತಿ, ಮುಳಿಹಿತ್ಲು ಫ್ರೆಂಡ್ಸ್ ಸರ್ಕಲ್ ತಂಡ ಹಾಗೂ ಸೋಮೇಶ್ವರ ಫ್ರೆಂಡ್ಸ್ ತಂಡಗಳು ಜಂಟಿಯಾಗಿ ತೃತೀಯ ಪ್ರಶಸ್ತಿ ಪಡೆದವು.

ಪಿಲಿ ನಲಿಕೆಯ ವಿಶೇಷ ಪ್ರಶಸ್ತಿಗಳಾದ ಉತ್ತಮ ತಾಸೆ ಪ್ರಶಸ್ತಿಯನ್ನು ಮುಳಿಹಿತ್ಲು ಗೇಮ್ಸ್ ಟೀಂ ತಂಡ, ಕಪ್ಪು ಹುಲಿ ಪ್ರಶಸ್ತಿಯನ್ನು ಪುರಲ್ದಪ್ಪೆನ ಮೋಕೆದ ಬೊಳ್ಳಿಲು ಪೊಳಲಿ ತಂಡ, ಮರಿ ಹುಲಿ ಪ್ರಶಸ್ತಿಯನ್ನು ಜೂನಿಯರ್ ಬಾಯ್ಸ್ ಚಿಲಿಂಬಿ ತಂಡ, ಮುಡಿ ಹಾರಿಸುವುದು ಪ್ರಶಸ್ತಿಯನ್ನು ಅಶೋಕ್ ಕಾಡಬೆಟ್ಟು ಬಳಗ ತಂಡ, ಬಣ್ಣಗಾರಿಕೆ ಪ್ರಶಸ್ತಿಯನ್ನು ಎಸ್ ಕೆಬಿ ಟೈಗರ್ಸ್ ಕುಂಪಲ ತಂಡ, ವೈಯಕ್ತಿಕ ಕುಣಿತ ಪ್ರಶಸ್ತಿಯನ್ನು ಗೋರಕ್ಷನಾಥ ಟೈಗರ್ಸ್ ತಂಡ ಪಡೆದವು.

ಬಹುಮಾನ ವಿತರಣಾ ಸಮಾರಂಭದಲ್ಲಿ ಸಂಸದ ಬ್ರಿಜೇಶ್ ಚೌಟ, ಎಸ್ ಡಿಎಂ ಬಿಬಿಎಂ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ.ದೇವರಾಜ್, ನಾರಾಯಣ ಗುರು ವಿಚಾರ ವೇದಿಕೆ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ , ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಪಿಲಿ ನಲಿಕೆ ಪ್ರತಿಷ್ಠಾನದ ಅಧ್ಯಕ್ಷ ಮಿಥುನ್ ರೈ, ನಮ್ಮ ಟಿ.ವಿ.ಯ ಆಡಳಿತ ನಿರ್ದೇಶಕ ಡಾ.ಶಿವಶರಣ್ ಶೆಟ್ಟಿ, ತೀರ್ಪುಗಾರರಾದ ಕೆ.ಕೆ.ಪೇಜಾವರ, ವೆಂಕಟೇಶ ಭಟ್ ಪಾವಂಜೆ ಉಪಸ್ಥಿತರಿದ್ದರು. ನವೀನ್ ಶೆಟ್ಟಿ ಎಡ್ಮೆಮಾರು ಕಾರ್ಯಕ್ರಮ ನಿರೂಪಿಸಿದರು.







Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News