ಸುರತ್ಕಲ್: ಹುಲಿ ಕುಣಿತದ ಸೌಹಾರ್ದ ಊದು ಕಾರ್ಯಕ್ರಮ

Update: 2024-10-13 12:54 GMT

ಸುರತ್ಕಲ್: ಕಾನ ಫ್ರೆಂಡ್ಸ್ ಸುರತ್ಕಲ್ ಇದರ ವತಿಯಿಂದ ಮಂಗಳೂರು ದಸರಾ ಮೆರವಣಿಗೆಗೆ ಪ್ರಥಮ ವರ್ಷದ ಕಲಾ ಕಾಣಿಕೆ ಹುಲಿ ಕುಣಿತದ ಸೌಹಾರ್ದ ಊದು ಕಾರ್ಯಕ್ರಮ ಶುಕ್ರವಾರ ಕಾನದಲ್ಲಿ ನಡೆಯಿತು.

ಸಾಮಾಜಿಕ ಹೋರಾಟಗಾರ ಮುನೀರ್ ಕಾಟಿಪಳ್ಳ ಭಾಗವಹಿಸಿ ಮಾತನಾಡಿ, ಜಾತಿ ಧರ್ಮದ ಸಂಕೋಲೆಗಳಿಂದ ಬಂಧಿಸಲ್ಪಪಡುತ್ತಿದ್ದ ದರಸಾ ಸೌಹಾರ್ದ ಕಾರ್ಯಕ್ರಮವಾಗುತ್ತಾ ಬರುತ್ತಿದೆ. ಕಾನ ಫ್ರೆಂಡ್ಸ್ ಈ ಮೂಲಕ ಸೌಹಾರ್ದ ಕಟ್ಟುವ ಕೆಲಸ ಮಾಡುವತ್ತಿರವುದು ಮೆಚ್ಚುವಂತ ಕೆಲಸ ಎಂದು ಶುಭಹಾರೈಸಿದರು.

ಕಾನ ಬದ್ರಿಯ ಜುಮಾ ‌ಮಸೀದಿಯ ಮಾಜಿ ಅಧ್ಯಕ್ಷ ಮುಹಮ್ಮದ್ ಅನೀಸ್, ಸುನಿಲ್ ಕುಮಾರ್‌ ಬಜಾಲ್, ಬಿ.ಕೆ. ಇಮ್ತಿಯಾಝ್ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿ, ಜಾತಿ ಧರ್ಮಗಳ ನಡುವೆ ಅನೇಕ ರೀತಿಯ ಅಪನಂಬಿಕೆ ಗಳು ಬಂದಿದ್ದರೂ ಕಾನದಲ್ಲಿ ಈ ವರೆಗೂ ಇಲ್ಲಿ ಯಾವುದೇ ರೀತಿಯ ಕೋಮು ಪ್ರಚೋಧನೆ, ಗಲಾಟೆಗಳಿಗೆ ಅವಕಾಶ ನೀಡಿಲ್ಲ. ಇಂತಹಾ ಸೌಹಾರ್ದ ಎಂದೆಂದಿಗೂ ಮುಂದುವರಿಯಲಿ ಎಂದು ಶುಭಹಾರೈಸಿದರು.

ಇದೇ ವೇಳೆ 40 ವರ್ಷಗಳಿಂದ ಹುಲಿ ಕುಣಿತದ ಸೇವೆ ಮಾಡಿತ್ತಾ ಬಂದಿರುವ ಮುಸ್ತಫಾ ಕಾನ, ಹುಲಿವೇಷ ಕಲಾವಿದ ಹರೀಶ್ ಕಾನ ಅವರನ್ನು ಅತಿಥಿಗಳು ಸನ್ಮಾನಿಸಿ ಗೌರವಿಸಿದರು. ಚರ್ಮವಾದ್ಯ ತಂಡದ ಮುಖಂಡ ಅರುಣ್ ಕುಮಾರ್ ಬಾಂದೊಟ್ಟು, ಪ್ಲಾನೆಟ್ ಬಿ ತಂಡದ ಮುಖ್ಯಸ್ಥ ಸುಮಿತ್ ಕಾನ ಮೊದಲಾದವರನ್ನು ಇದೇ ಸಂದರ್ಭ ಸನ್ಮಾನಿಸಿ ಗೌರವಿಸಲಾಯಿತು.

ಸಮಾರಂಭದಲ್ಲಿ ಹಿಂದೂ ಧಾರ್ಮಿಕ ಸೇವಾ ಸಮಿತಿಯ ಸದಸ್ಯ ರಮೇಶ್ ಕಾನ, ಸೆಕ್ರಡ್ ಆರ್ಟ್ ಚರ್ಚ್ ನ ಮುಖಂಡ ಪ್ರಾನ್ಸಿಸ್‌, ನಝೀರ್ ಕುದ್ರೋಳಿ, ಬೆಸ್ಟ್ ಇಲೆವೆನನ ಜಗದೀಶ, ಮನಪಾ ನಾಮನಿರ್ದೇಶಕ ಸದಸ್ಯ ಕಿಶೋರ್‌ಶೆಟ್ಟಿ, ನಿತಿನ್ ಕುಮಾರ್ ಕುತ್ತಾರ್, ಡಾ. ಜೀವನ್ ರಾಜ್ ಕುತ್ತಾರ್, ವತನ್ ಕುಮಾರ್, ಕಟ್ಲ ದೈವಸ್ಥಾನದ ಗುರಿಕಾರ ಶಂಕರ ಗುರಿಕಾರ, ಸುಮುದಾಯ ಸಾಂಸ್ಕೃತಿಕ ಇಲಾಖೆಯ ಚರಣ್ ವಾಮಂಜೂರು ಮೊದಲಾದವರು ಉಪಸ್ಥಿತರಿದ್ದರು.






Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News