ಮಂಗಳೂರು ದಸರಾ ಮೆರವಣಿಗೆಗೆ ಚಾಲನೆ

Update: 2024-10-13 14:26 GMT

ಮಂಗಳೂರು: ಮಂಗಳೂರು ದಸರಾ ಮೆರವಣೆಗೆಗೆ ಮಾಜಿ ಕೇಂದ್ರ ವಿತ್ತ ಸಚಿವ ಹಾಗೂ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ರೂವಾರಿ ಬಿ.ಜನಾರ್ದನ ಪೂಜಾರಿ ವೈಭವದ ಮಂಗಳೂರು ದಸರಾ ಮೆರವಣಿಗಗೆ ಚಾಲನೆ ನೀಡಿದರು.

ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಿಂದ ಶ್ರೀ ಮಹಾಗಣಪತಿ,ಬ್ರಹ್ಮಶ್ರೀ ನಾರಾಯಣ ಗುರುಗಳ ವಿಗ್ರಹ ಬಳಿಕ ನವದುರ್ಗೆಯರ ವಿಗ್ರಹಗಳ ಪೂಜೆಯ ಬಳಿಕ ಅಂತಿಮವಾಗಿ ಶಾರದಾ ದೇವಿ ವಿಗ್ರಹದ ಮೆರವಣಿಗೆಗೆ ಚಾಲನೆ ನೀಡುವ ಮೂಲಕ ವೈಭವ ಮಂಗಳೂರು ದಸರಾ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಈ ಸಂದರ್ಭ ಶಾಸಕ ವೇದವ್ಯಾಸ ಕಾಮತ್, ಪ್ರತಾಪ್ ಸಿಂಹ ನಾಯಕ್ , ಮಾಜಿ ಸಚಿವ ರಮಾನಾಥ ರೈ, ಮಾಜಿ ಮೇಯರ್ ಶಶಿಧರ ಹೆಗ್ಡೆ, ದೇವಸ್ಥಾನದ ಕ್ಷೇತ್ರಾಡಳಿತ ಮಂಡಳಿಯ ಉಪಾಧ್ಯಕ್ಷ ಊರ್ಮಿಳ ರಮೇಶ್, ಕಾರ್ಯದರ್ಶಿ ಬಿ.ಮಾಧವ ಸುವರ್ಣ, ಖಜಾಂಜಿ ಪದ್ಮರಾಜ್ ಆರ್,ಆಡಳಿತ ಮಂಡಳಿಯ ಸದಸ್ಯರಾದ ರವಿಶಂಕರ್ ಮಿಜಾರ್,ಎಂ ಶೇಖರ ಪೂಜಾರಿ, ಸಂತೋಷ್ ಕುಮಾರ್,ಜಗದೀಪ್ ಡಿ ಸುವರ್ಣ, ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ದೇವೇಂದ್ರ ಪೂಜಾರಿ, ಸಹ ಅಧ್ಯಕ್ಷ ಡಾ.ಅನಸೂಯ ಬಿ.ಟಿ.ಸಾಲ್ಯಾನ್ , ಉಪಾಧ್ಯಕ್ಷ ಡಾ.ಬಿ.ಜೆ. ಸುವರ್ಣ ಸದಸ್ಯರಾದ ಚಿತ್ತ ರಂಜನ್ ಗರೋಡಿ , ಕೃತೀನ್ ಡಿ ಅಮೀನ್ , ಎಚ್.ಎಸ್. ಜಯರಾಜ್,ಹರಿಕೃಷ್ಣ ಬಂಟ್ವಾಳ್, ರಾಧಾಕೃಷ್ಣ,ಶೈಲೇಂದ್ರ ವೈ ಸುವರ್ಣ, ಜತೀನ್ ಅತ್ತಾವರ, ರಮಾನಾಥ ಕಾರಂದೂರು, ಚಂದನ್ ದಾಸ್, ಪಿ.ಕೆ.ಗೌರವಿ ರಾಜಶೇಖರ್ ಜಯ ಕುಮಾರ್,ಲೀಲಾಕ್ಷ ಕರ್ಕೇರಾ, ಕಿಶೋರ್ ಡೊಂಗರ ಕೇರಿ,ಬಿ.ವಾಸುದೇವ ಕೋಟ್ಯಾನ್ ಮೊದಲಾದ ವರು ಉಪಸ್ಥಿತರಿದ್ದರು.

ಕುದ್ರೋಳಿಯಿಂದ ಹೊರಟ ದಸರಾ ಮೆರವಣಿಗೆ ದಸರಾ ಶೋಭಾಯಾತ್ರೆ ಶ್ರೀ ಕ್ಷೇತ್ರದಿಂದ ಹೊರಟು ಮಣ್ಣಗುಡ್ಡ ಮಾರ್ಗವಾಗಿ, ನಾರಾಯಣ ಗುರು ವೃತ್ತ -ಲಾಲ್‌ಬಾಗ್, ಬಲ್ಲಾಳ್‌ಬಾಗ್, ಪಿವಿಎಸ್ ವೃತ್ತ, ನವಭಾರತ್ ಸರ್ಕಲ್, ಕೆ.ಎಸ್‌. ರಾವ್ ರಸ್ತೆ, ಹಂಪನಕಟ್ಟೆ ವಿವಿ ಕಾಲೇಜು ವೃತ್ತದಿಂದ ಬಲಕ್ಕೆ ತಿರುಗಿ, ಗಣಪತಿ ಹೈಸ್ಕೂಲ್ ಮಾರ್ಗವಾಗಿ ಶ್ರೀ ವೆಂಕಟರಮಣ ದೇವಸ್ಥಾನದ ಮುಂಭಾಗದಿಂದ "ಕಾರ್‌ಸ್ಟ್ರೀಟ್, ಚಿತ್ರಾ ಟಾಕೀಸು, ಅಳಕೆ ಮಾರ್ಗ ವಾಗಿ ಶ್ರೀ ಕ್ಷೇತ್ರ ಕುದ್ರೋಳಿಗೆ ಮರಳಲಿದೆ.ಅ.14ರಂದು ಮುಂಜಾನೆ, ಪೂಜೆ ಬಲಿ, ಪ್ರಾತಃಕಾಲ ಮಂಟಪ ಪೂಜೆ ಬಳಿಕ ದೇವಳದ ಪುಷ್ಕರಣಿಯಲ್ಲಿ ಶಾರದಾ ವಿಸರ್ಜನೆ ನಡೆಯಲಿದೆ.






 


 


Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News