ರಂಜನಿ ನೆನಪಿನ 9 ದಿನಗಳ ಸಂಗೀತೋತ್ಸವ ಉದ್ಘಾಟನೆ

Update: 2024-09-04 14:56 GMT

ಉಡುಪಿ: ಉಡುಪಿಯ ರಂಜನಿ ಮೆಮೋರಿಯಲ್ ಟ್ರಸ್ಟ್ ಹಮ್ಮಿಕೊಂಡಿರುವ 9 ದಿನಗಳ ವಾರ್ಷಿಕ ಸಂಗೀತೋತ್ಸ ವವನ್ನು, ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಡಿಪಾರ್ಟ್‌ಮೆಂಟ್ ಆಫ್ ಸೋಶಿಯಲ್ ಸೈನ್ಸ್ ಇದರ ಡೀನ್ ಡಾ.ಬಿಂದಾ ಪರಾಂಜಪೆ ಇತ್ತೀಚೆಗೆ ಉದ್ಘಾಟಿಸಿದರು.

ಉದ್ಘಾಟನಾ ಸಮಾರಂಭದಲ್ಲಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಗಂಗಾಧರ ರಾವ್, ಕಾರ್ಯದರ್ಶಿ ಮುರಳಿ ಕಡೆಕಾರ್ ಅವರನ್ನು ಗೌರವಿಸಲಾಯಿತು.

ಒಟ್ಟು 9 ದಿನಗಳ ಕಾಲ, ರಾಜ್ಯ ಮತ್ತು ರಾಷ್ಟ್ರಮಟ್ಟದ ಕಲಾವಿದರಿಂದ ಗುಣಮಟ್ಟದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗಿದೆ. ಮೊದಲ ದಿನದ ಕಾರ್ಯಕ್ರಮದಲ್ಲಿ ನಾಗೇಶ್ ಬಪ್ಪನಾಡು ಮತ್ತು ತಂಡದವರಿಂದ ನಾಗಸ್ವರ ವಾದನ ಕಚೇರಿ ನಡೆಯಿತು.

ವಿದ್ವಾಂಸರಾದ ಡಾ. ಬಿಂದಾ ಪರಾಂಜಪೆ ಅವರು ಕಲಾಕ್ಷೇತ್ರಕ್ಕೆ ದೇವದಾಸಿ ಯರ ಕೊಡುಗೆ ಕುರಿತು ವಿಶೇಷ ಉಪನ್ಯಾಸ ನೀಡಿದರು. ರಮಣ ಬಾಲಚಂದ್ರನ್ ಅವರು ವೀಣಾವಾದನದ ಮೂಲಕ ಮೊದಲ ದಿನದ ಪ್ರಧಾನ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ರಂಜನಿ ಮೆಮೋರಿಯಲ್ ಟ್ರಸ್ಟ್ ನ ಮುಖ್ಯಸ್ಥ ಪ್ರೊ. ಅರವಿಂದ ಹೆಬ್ಬಾರ್ ಸ್ವಾಗತಿಸಿದರು. ಯುವಕಲಾವಿದೆ ಸಮನ್ವಿ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News