ಗೋವು ಕಳ್ಳಸಾಗಣೆ ವೇಳೆ ಜಟಾಪಟಿ: 10 ಮಂದಿ ಬಜರಂಗ ದಳ ಕಾರ್ಯಕರ್ತರಿಗೆ ಗಾಯ

Clash during cow smuggling: 10 Bajrang Dal workers injured

Update: 2023-12-28 14:19 GMT

ಸಾಂದರ್ಭಿಕ ಚಿತ್ರ (PTI)

ಭುವನೇಶ್ವರ: ಗುಂಪೊಂದು ಗೋವುಗಳನ್ನು ಪಶ್ಚಿಮ ಬಂಗಾಳಕ್ಕೆ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಸಂದರ್ಭದಲ್ಲಿ ನಡೆದಿರುವ ಗುಂಪು ಘರ್ಷಣೆಯಲ್ಲಿ ಕನಿಷ್ಠ 10 ಮಂದಿ ಬಜರಂಗ ದಳ ಕಾರ್ಯಕರ್ತರು ಗಾಯಗೊಂಡಿರುವ ಘಟನೆ ಗುರುವಾರ ಬೆಳಗ್ಗೆ ಒಡಿಶಾದ ಬಾಲಸೋರ್ ಜಿಲ್ಲೆಯ ಬಳಿ ನಡೆದಿದೆ. 
ಕನಿಷ್ಠ ಮೂರು ವ್ಯಾನ್ ಗಳಲ್ಲಿ ಗೋವುಗಳನ್ನು ಸಾಗಿಸುವಾಗ ಕಟಕ್ ನ ಸಾಲೇಪುರ್ ಪ್ರದೇಶದಿಂದ ಸುಮಾರು 200 ಕಿಮೀ ದೂರ ಅವನ್ನು ಬಜರಂಗ ದಳ ಕಾರ್ಯಕರ್ತರು ಹಿಂಬಾಲಿಸಿದ್ದಾರೆ. ಕೊನೆಗೆ ಬಾಲಸೋರ್ ಪಟ್ಟಣದ ಹೊರವಲಯವಾದ ರಾಷ್ಟ್ರೀಯ ಹೆದ್ದಾರಿ 60ರ ಫುಲಡಿ ಬಳಿ ಗುರುವಾರ ಬೆಳಗ್ಗೆ ತಡೆದಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 
 “ಬಜರಂಗ ದಳ ಕಾರ್ಯಕರ್ತರು ಹಾಗೂ ಗೋವುಗಳ ಸಾಗಾಟ ನಡೆಸುತ್ತಿದ್ದ ವ್ಯಕ್ತಿಗಳ ನಡುವೆ ಜಟಾಪಟಿ ನಡೆದಿದ್ದು, ಗೋವುಗಳ ಸಾಗಾಟ ನಡೆಸುತ್ತಿದ್ದವರು ಸ್ಥಳೀಯ ಗ್ರಾಮಸ್ಥರ ನೆರವು ಪಡೆದಿದ್ದಾರೆ” ಎಂದು ಬಾಲಸೋರ್ ನ ಸದರ್ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 
ಸ್ಥಳೀಯ ಗ್ರಾಮಸ್ಥರು ಬಿದಿರಿನ ದೊಣ್ಣೆಗಳು ಹಾಗೂ ಇತರ ಆಯುಧಗಳೊಂದಿಗೆ ಧಾವಿಸಿ, ಬಜರಂಗ ದಳದ ಕಾರ್ಯಕರ್ತರ ಮೇಲೆ ದಾಳಿ ನಡೆಸಿದ್ದರಿಂದ ಅವರ ಪೈಕಿ ಕನಿಷ್ಠ 10 ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಮೂವರು ಬಜರಂಗ ದಳ ಕಾರ್ಯಕರ್ತರು ಗಂಭೀರ ಮೂಳೆ ಮುರಿತ ಹಾಗೂ ತಲೆಗೆ ಏಟಾದ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ. 
ಬಜರಂಗ ದಳ ಕಾರ್ಯಕರ್ತರು ಪ್ರಯಾಣಿಸುತ್ತಿದ್ದ ವಾಹನಗಳನ್ನು ತೀವ್ರವಾಗಿ ಜಖಂಗೊಳಿಸಲಾಗಿದೆ. ಈ ಸಂಬಂಧ ಬಾಲಸೋರ್ ನ ಸದರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News