ಮಧ್ಯಾಹ್ನದೂಟದಲ್ಲಿ ಕೊಬ್ಬು, ತೈಲ ಪ್ರಮಾಣ ಇಳಿಸುವ ಕೇಂದ್ರದ ಸೂಚನೆಗೆ ‘ಆಹಾರ ಹಕ್ಕು ಅಭಿಯಾನ’ ವಿರೋಧ

Update: 2025-03-21 21:00 IST
ಮಧ್ಯಾಹ್ನದೂಟದಲ್ಲಿ ಕೊಬ್ಬು, ತೈಲ ಪ್ರಮಾಣ ಇಳಿಸುವ ಕೇಂದ್ರದ ಸೂಚನೆಗೆ ‘ಆಹಾರ ಹಕ್ಕು ಅಭಿಯಾನ’ ವಿರೋಧ

ಸಾಂದರ್ಭಿಕ ಚಿತ್ರ 

  • whatsapp icon

ಹೊಸದಿಲ್ಲಿ: ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಯೋಜನೆಯಡಿ ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ನೀಡಲಾಗುವ ಮಧ್ಯಾಹ್ನದೂಟದಲ್ಲಿ ತೈಲ ಬಳಕೆಯನ್ನು ಕಡಿಮೆಗೊಳಿಸಲು ಕೇಂದ್ರ ಸರಕಾರವು ಒತ್ತು ನೀಡುತ್ತಿರುವುದು ಅವೈಜ್ಞಾನಿಕವೆಂದು ಆಹಾರ ಹಾಗೂ ಪೌಷ್ಟಿಕತೆಗಾಗಿನ ಕಾರ್ಯಕರ್ತರ ಸಂಘಟನೆ ‘ ಆಹಾರದ ಹಕ್ಕು ಅಭಿಯಾನ’ ಹೇಳಿದೆ.

ಮಕ್ಕಳಿಗೆ ಆರೋಗ್ಯಪೂರ್ಣವಾದ ಕೊಬ್ಬು ಹಾಗೂ ತೈಲವನ್ನು ಹೆಚ್ಚಿನ ಪ್ರಮಾಣದಲ್ಲಿ ಒದಗಿಸುವ ಅಗತ್ಯವಿದೆ ಎಂದು ಕಾರ್ಯಕರ್ತರು ಪ್ರತಿಪಾದಿಸಿದ್ದಾರೆ. ‘‘ ನಮ್ಮ ಅನುಭವದ ಪ್ರಕಾರ, ಬಡ ಸಮುದಾಯಗಳಲ್ಲಿ ಶಿಫಾರಸುಮಾಡಲ್ಪಟ್ಟ ಪ್ರಮಾಣದಲ್ಲಿ ಕೊಬ್ಬು ಹಾಗೂ ತೈಲ ಲಭ್ಯವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಹೀಗಾಗಿ ದೇಶದ ಬಹುತೇಕ ಭಾಗಗಳಲ್ಲಿ ಮಕ್ಕಳು ಹಾಗೂ ವಯಸ್ಕರು ಹೆಚ್ಚಿನ ಪ್ರಮಾಣದಲ್ಲಿ ಆರೋಗ್ಯಕರ ಕೊಬ್ಬು ಹಾಗೂ ತೈಲವನ್ನು ಸೇವಿಸಬೇಕಾಗಿದೆ ಎಂದು ಹೇಳಿಕೆ ತಿಳಿಸಿದೆ.

ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ ಕಾರ್ಯಕ್ರಮದಡಿ ಜಾರಿಗೊಳಿಸಲಾದ ಮದ್ಯಾಹ್ನದೂಟ ಕಾರ್ಯಕ್ರಮದಲ್ಲಿ ಅಡುಗೆ ತೈಲದ ಬಳಕೆಯನ್ನು ಶೇಕಡ 10ರಷ್ಟು ಕಡಿಮೆಗೊಳಿಸಬೇಕೆಂದು ಕೇಂದ್ರ ಶಿಕ್ಷಣ ಸಚಿವಾಲಯವು ಮಾರ್ಚ್ 15ರಂದು ಸೂಚನೆಯನ್ನು ನೀಡಿತ್ತು.

ಅಡುಗೆ ತೈಲದ ಬಳಕೆಯನ್ನು ಶೇ.10ರಷ್ಟು ಕಡಿಮೆಗೊಳಿಸಲು ಶಾಲೆಗಳಲ್ಲಿನ ಎಲ್ಲಾ ಬಾಣಸಿಗರಿಗೆ ತರಬೇತಿ ನೀಡಬೇಕು ಎಂದು ಸೂಚನಾಪತ್ರದಲ್ಲಿ ತಿಳಿಸಲಾಗಿದೆ. ಆಹಾರಪದಾರ್ಥಗಳನ್ನು ಎಣ್ಣೆಯಲ್ಲಿ ಗಾಢವಾಗಿ ಹುರಿಯುವ ಬದಲು ಗ್ರಿಲ್ಲಿಂಗ್, ಸ್ಟೀಮಿಂಗ್ ಅಥವಾ ಬೇಕಿಂಗ್‌ನಂತಹ ಆರೋಗ್ಯಕರ ಅಡುಗೆ ವಿಧಾನಗಳನ್ನು ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದೆ.

ಶಿಕ್ಷಣ ಸಚಿವಾಲಯದ ಈ ಸೂಚನೆಯನ್ನು ವಿರೋಧಿಸಿರುವ ಆಹಾರದ ಹಕ್ಕಿನ ಅಭಿಯಾನವು ಮಧ್ಯಾಹ್ನದೂಟದ ಮೆನುವಿನಲ್ಲಿ ಸೇರ್ಪಡೆಗೊಳಿಸಲಾಗುವ ವೈವಿಧ್ಯಮಯ ಖಾದ್ಯಗಳು ಅಥವಾ ಆಹಾರದ ಪೌಷ್ಟಿಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಯಾವುದೇ ಮಾರ್ಗೋಪಾಯಗಳನ್ನು ಸೂಚನಾ ಪತ್ರದಲ್ಲಿ ತಿಳಿಸಲಾಗಿಲ್ಲ ಎಂದು ಆಹಾರದ ಹಕ್ಕು ಅಭಿಯಾನ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News