ಕೇಂದ್ರ ಹಾಗೂ ರಾಜ್ಯ ಪಡೆಗಳ 1037 ಸಿಬ್ಬಂದಿಗೆ ಪೊಲೀಸ್ ಸೇವಾ ಪದಕ ಘೋಷಣೆ

Update: 2024-08-14 16:59 GMT

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ : ಸ್ವಾತಂತ್ರ್ಯ ದಿನಾಚರಣೆಯ ಮುನ್ನಾ ದಿನವಾದ ಬುಧವಾರ ಕೇಂದ್ರ ಸರಕಾರವು ವಿವಿಧ ಕೇಂದ್ರ ಹಾಗೂ ರಾಜ್ಯ ಪಡೆಗಳಲ್ಲಿ ಉತ್ಕೃಷ್ಟ ಸೇವೆಗಳನ್ನು ಸಲ್ಲಿಸಿದ 1037 ಪೊಲೀಸ್‌ಸಿಬ್ಬಂದಿಗೆ ಸೇವಾ ಪದಕಗಳನ್ನು ಘೋಷಿಸಿದೆ.

ಗರಿಷ್ಠ 52 ಶೌರ್ಯ ಪ್ರಶಸ್ತಿಗಳನ್ನು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್)ಗೆ ನೀಡಲಾಗಿದೆ, ಜಮ್ಮುಕಾಶ್ಮೀರದ ಪೊಲೀಸರಿಗೆ 31, ಉತ್ತರಪ್ರದೇಶ ಹಾಗೂ ಮಹಾರಾಷ್ಟ್ರಗಳ ಪೊಲೀಸ್ ಸಿಬ್ಬಂದಿಗೆ ತಲಾ 17, ಚತ್ತೀಸ್‌ಗಡದ 14 ಹಾಗೂ ಮಧ್ಯಪ್ರದೇಶದ 12 ಪೊಲೀಸರಿಗೆ ಶೌರ್ಯ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಅಗ್ನಿಶಾಮಕದಳದ ನಾಲ್ವರು ಹಾಗೂ ಓರ್ವ ನಾಗರಿಕ ರಕ್ಷಣಾ ಸಿಬ್ಬಂದಿಗೂ ಶೌರ್ಯಪ್ರಶಸ್ತಿಯನ್ನು ನೀಡಲಾಗಿದೆ.

ಅತ್ಯುನ್ನತ ಪೊಲೀಸ್ ಪುರಸ್ಕಾರ ರಾಷ್ಟ್ರಪತಿಗ ಶೌರ್ಯ ಪ್ರಶಸ್ತಿಯನ್ನು ತೆಲಂಗಾಣದ ಪೊಲೀಸ್ ಹೆಡ್‌ ಕಾನ್‌ಸ್ಟೇಬಲ್ ಚದುವು ಯಾದಯ್ಯ ಅವರಿಗೆ ನೀಡಲಾಗಿದೆ. 2022,ಜುಲೈ 25ರಂದು ಇಬ್ಬರು ಕುಖ್ಯಾತ ಸರಗಳ್ಳರನ್ನು ಹಾಗೂ ಶಸ್ತ್ರಾಸ್ತ್ರ ಕಳ್ಳಸಾಗಣೆದಾರರನ್ನು ಬಂಧಿಸುವಲ್ಲಿ ಅಭೂತಪೂರ್ವ ಶೌರ್ಯವನ್ನು ಪ್ರದರ್ಶಿಸಿದ್ದಕ್ಕಾಗಿ ಅವರಿಗೆ ಈ ಉನ್ನತ ಪುರಸ್ಕಾರನ್ನು ನೀಡಲಾಗಿದೆ.

ಅಸಾಧಾರಣ ಸೇವೆಗಾಗಿ 94 ಮಂದಿ ಪೊಲೀಸ್ ಸಿಬ್ಬಂದಿಗೆ ರಾಷ್ಟ್ರಪತಿಗಳ ಪೊಲೀಸ್ ಪದಕವನ್ನು ಘೋಷಿಸಲಾಗಿದೆ ಹಾಗೂ 729 ಪೊಲೀಸರಿಗೆಗೆ ಉತ್ಕೃಷ್ಟ ಸೇವಾ ಪುರಸ್ಕಾರವನ್ನು ಪ್ರಕಟಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News