ಬಿಹಾರ | ʼನಳ್ಳಿ ನೀರಿʼನ ವಿಚಾರಕ್ಕೆ ಕೇಂದ್ರ ಸಚಿವ ನಿತ್ಯಾನಂದ ರೈ ಅವರ ಸೋದರಳಿಯರ ನಡುವೆ ಗುಂಡಿನ ಚಕಮಕಿ : ಓರ್ವ ಮೃತ್ಯು, ಇಬ್ಬರಿಗೆ ಗಾಯ

Update: 2025-03-20 15:58 IST
A minor dispute between two brothers turned violent on Thursday when on person lost their life, while another was injured in Bihars Naugachhia

Credit: X/@PTI_news

  • whatsapp icon

ಪಾಟ್ನಾ: ಬಿಹಾರದ ಗ್ರಾಮವೊಂದರಲ್ಲಿ ಕೇಂದ್ರ ಸಚಿವ ನಿತ್ಯಾನಂದ ರೈ ಅವರ ಇಬ್ಬರು ಸೋದರಳಿಯರ ನಡುವೆ ʼನಳ್ಳಿ ನೀರಿʼನ ವಿಚಾರಕ್ಕೆ ನಡೆದ ವಾಗ್ವಾದವು ತಾರಕಕ್ಕೇರಿ ಗುಂಡಿನ ಚಕಮಕಿ ನಡೆದಿದೆ. ಓರ್ವ ಮೃತಪಟ್ಟು ಇಬ್ಬರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಭಾಗಲ್ಪುರ ಸಮೀಪದ ನೌಗಾಚಿಯಾದ ಜಗತ್ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವಿಶ್ವಜಿತ್ ಮತ್ತು ಜಯಜಿತ್ ಯಾದವ್ ನಡುವೆ ಗುಂಡಿನ ಚಕಮಕಿ ನಡೆದಿದೆ.

ನೌಗಾಚಿಯಾ ಎಸ್ಪಿ ಪ್ರೇರಣಾ ಕುಮಾರ್ ಈ ಕುರಿತು ಪ್ರತಿಕ್ರಿಯಿಸಿ, ಸಹೋದರರು ನಳ್ಳಿ ನೀರಿನ ವಿಷಯದಲ್ಲಿ ಗಲಾಟೆ ಮಾಡಿಕೊಂಡಿಕೊಂಡು ಪರಸ್ಪರ ಗುಂಡಿನ ದಾಳಿ ನಡೆಸಿದರು. ಈ ವೇಳೆ ಅವರ ತಾಯಿ ಮಧ್ಯಪ್ರವೇಶಿಸಲು ಪ್ರಯತ್ನಿಸಿದರು. ವಿಶ್ವಜಿತ್ ಸ್ಥಳದಲ್ಲೇ ಮೃತಪಟ್ಟರು. ಜಯಜಿತ್ ಮತ್ತು ತಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೇಳಿದರು.

ಗ್ರಾಮಸ್ಥರ ಪ್ರಕಾರ, ಈ ಕುಟುಂಬವು ಬಿಜೆಪಿಯ ಹಿರಿಯ ನಾಯಕ ಮತ್ತು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಅವರ ಸಂಬಂಧಿಕರು. ಆದ್ದರಿಂದ ಪ್ರಕರಣವನ್ನು ಹೈ-ಪ್ರೊಫೈಲ್ ಪ್ರಕರಣ ಎಂದು ಪರಿಗಣಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News