ಗಾಝಾ ಕದನ ವಿರಾಮ | ಮೂವರು ಇಸ್ರೇಲ್, ಐವರು ಥಾಯ್ ಪ್ರಜೆಗಳನ್ನು ಬಿಡುಗಡೆ ಮಾಡಿದ ಹಮಾಸ್
Update: 2025-01-30 18:24 IST

PC : NDTV
ಜೆರುಸೆಲೆಂ : ಇಸ್ರೇಲ್ ಮತ್ತು ಹಮಾಸ್ ನಡುವಿನ ಗಾಝಾ ಕದನ ವಿರಾಮದ ಭಾಗವಾಗಿ ಗುರುವಾರ ಹಮಾಸ್ ಹೋರಾಟಗಾರರು ಎಂಟು ಮಂದಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ್ದಾರೆ.
ಬಿಡುಗಡೆಯಾದವರ ಪೈಕಿ ಮೂವರು ಇಸ್ರೇಲ್ ಪ್ರಜೆಗಳು, ಐವರು ಥಾಯ್ ಪ್ರಜೆಗಳು ಎಂದು ತಿಳಿದು ಬಂದಿದೆ. ಇಸ್ರೇಲ್ ಯೋಧೆ ಅಗಮ್ ಬರ್ಗರ್ ಅವರನ್ನು ಮೊದಲು ಉತ್ತರ ಗಾಝಾದಲ್ಲಿ ಬಿಡುಗಡೆ ಮಾಡಲಾಯಿತು. ಬಳಿಕ, ದಕ್ಷಿಣ ಗಾಝಾ ನಗರದಲ್ಲಿನ ಖಾನ್ ಯೂನಿಸ್‌ನಲ್ಲಿ, ಹತ್ಯೆಗೀಡಾದ ಹಮಾಸ್ ನಾಯಕ ಯಾಹ್ಯಾ ಸಿನ್ವರ್ ಅವರ ನಾಶವಾದ ಮನೆಯ ಮುಂದೆ, ಇತರ ಏಳು ಒತ್ತೆಯಾಳುಗಳನ್ನು ಹಸ್ತಾಂತರಿಸಲಾಯಿತು.