ಭಾರತೀಯ ಕಂಪನಿ ಕುರಿತು ಹಿಂಡೆನ್‌ಬರ್ಗ್‌ ರೀತಿಯ ಇನ್ನೊಂದು 'ಸ್ಫೋಟಕ' ವರದಿ!

Update: 2023-08-25 10:05 GMT

Photo credit: bqprime.com

ಹೊಸದಿಲ್ಲಿ: ಅಮೆರಿಕಾದ ಶಾರ್ಟ್‌ ಸೆಲ್ಲರ್‌- ಹಿಂಡನ್‌ಬರ್ಗ್‌ ಸಂಸ್ಥೆ ಭಾರತದ ಅದಾನಿ ಸಮೂಹ ಸಂಸ್ಥೆಗಳು ವ್ಯಾಪಕ ಅವ್ಯವಹಾರಗಳನ್ನು ನಡೆಸಿವೆ ಎಂದು ಆರೋಪಿಸಿ ಸ್ಫೋಟಕ ವರದಿಯನ್ನು ಹೊರತಂದ ಕೆಲವೇ ತಿಂಗಳುಗಳಲ್ಲಿ ಜಾರ್ಜ್‌ ಸೊರೊಸ್ ಮತ್ತು ರಾಕ್‌ಫೆಲ್ಲರ್‌ ಬ್ರದರ್ಸ್‌ ಫಂಡ್‌ ನಂತಹವರಿಂದ ಪ್ರವರ್ತಿಸಲ್ಪಟ್ಟ ಆರ್ಗನೈಸ್ಡ್‌ ಕ್ರೈಂ ಎಂಡ್‌ ಕರಪ್ಶನ್‌ ರಿಪೋರ್ಟಿಂಗ್‌ ಪ್ರಾಜೆಕ್ಟ್‌ (OCCRP) ಭಾರತದ ಕೆಲ ಕಾರ್ಪೊರೇಟ್‌ ಸಂಸ್ಥೆಗಳ ಕುರಿತಂತೆ ಇನ್ನೊಂದು ದೊಡ್ಡ ವಿಚಾರ “ಬಯಲುಗೊಳಿಸಲು” ಯೋಜಿಸಿದೆ ಎಂದು ವರದಿಯಾಗಿದೆ.

ಒಸಿಸಿಆರ್‌ಪಿ ತನ್ನನ್ನು ಯುರೋಪ್‌, ಆಫ್ರಿಕಾ, ಏಷ್ಯಾ, ಲ್ಯಾಟಿನ್‌ ಅಮೆರಿಕಾದಾದ್ಯಂತ ಹರಡಿರುವ 24 ಲಾಭೋದ್ದೇಶರಹಿತ ತನಿಖಾ ಕೇಂದ್ರಗಳು ರಚಿಸಿರುವ ತನಿಖಾ ವರದಿ ಮಾಡುವಿಕೆ ಪ್ಲಾಟ್‌ಫಾರ್ಮ್‌ ಎಂದು ಪರಿಚಯಿಸುತ್ತದೆ.

ಆದರೆ ಭಾರತದ ಕಂಪನಿಗಳ ಕುರಿತು ವರದಿ ತರುವ ಕುರಿತಂತೆ ಅಧಿಕೃತವಾಗಿ ಈ ಸಂಸ್ಥೆ ಏನನ್ನೂ ಹೇಳಿಲ್ಲ

2006ರಲ್ಲಿ ರಚಿಸಲಾದ ಈ ಸಂಸ್ಥೆಯು ಸಂಘಟಿತ ಅಪರಾಧ ಕುರಿತು ವರದಿ ಮಾಡುತ್ತದೆ ಹಾಗೂ ಇವುಗಳನ್ನು ಲೇಖನ ರೂಪದಲ್ಲಿ ಮಾಧ್ಯಮ ಸಂಸ್ಥೆಗಳ ಜೊತೆ ಪಾಲುದಾರಿಕೆಯಲ್ಲಿ ಪ್ರಕಟಿಸುತ್ತದೆ.

ತನ್ನ ವೆಬ್‌ಸೈಟ್‌ನಲ್ಲಿ ಒಸಿಸಿಆರ್‌ಪಿ ತನ್ನ ಸಾಂಸ್ಥಿಕ ದಾನಿಗಳಲ್ಲಿ ಫೈನಾನ್ಶಿಯರ್‌ ಮತ್ತು ಜಗತ್ತಿನಾದ್ಯಂತ ಕೆಲವೊಂದು ಪ್ರಖರ (ರ್ಯಾಡಿಕಲ್)‌ ಕಾರಣಗಳಿಗಾಗಿ ಹಣಕಾಸು ಸಹಾಯ ಒದಗಿಸಲು ಆಸಕ್ತಿ ಹೊಂದಿರುವ ಜಾರ್ಜ್‌ ಸೊರೋಸ್‌ ಅವರ ಓಪನ್‌ ಸೊಸೈಟಿ ಫೌಂಡೇಶನ್‌ಗಳನ್ನು ಗುರುತಿಸಿದೆ. ಒಸಿಸಿಆರ್‌ಪಿಯ ಇತರ ದಾನಿಗಳೆಂದರೆ ಫೋರ್ಡ್‌ ಫೌಂಡೇಶನ್‌, ರಾಕ್‌ಫೆಲ್ಲರ್‌ ಬ್ರದರ್ಸ್‌ ಫಂಡ್‌ ಹಾಗೂ ಓಕ್‌ ಫೌಂಡೇಶನ್.‌

ಭಾರತದ ಕಾರ್ಪೊರೇಟ್‌ ಸಂಸ್ಥೆಯ ಸ್ಟಾಕ್‌ಗಳಲ್ಲಿ ಸಾಗರೋತ್ತರ ಸಂಸ್ಥೆಗಳ ಹೂಡಿಕೆಯನ್ನು ಒಸಿಸಿಆರ್‌ಪಿಯ ಪ್ರಸ್ತಾವಿತ ವರದಿ ಬಯಲುಗೊಳಿಸಬಹುದೆಂದು ಹೇಳಲಾಗುತ್ತಿದೆ.

ಆದರೆ ಯಾವ ಭಾರತೀಯ ಕಂಪೆನಿಯ ಕುರಿತು ವರದಿ ಉಲ್ಲೇಖಿಸಲಿದೆ ಎಂಬ ಕುರಿತು ಮಾಹಿತಿಯಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News