ಚೆಸ್ ವಿಶ್ವ ಚಾಂಪಿಯನ್ ಡಿ ಗುಕೇಶ್ ಗೆ 5 ಕೋಟಿ ರೂ. ಬಹುಮಾನ ಘೋಷಿಸಿದ ತಮಿಳುನಾಡು ಸರಕಾರ
ಚೆನ್ನೈ: ವಿಶ್ವದ ಅತ್ಯಂತ ಕಿರಿಯ ಚೆಸ್ ಚಾಂಪಿಯನ್ ಆಗಿ ಹೊರಹೊಮ್ಮಿರುವ ಡಿ ಗುಕೇಶ್ ಅವರಿಗೆ ತಮಿಳುನಾಡು ಸರ್ಕಾರ 5 ಕೋಟಿ ರೂ. ನಗದು ಬಹುಮಾನವನ್ನು ಘೋಷಿಸಿದೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್, ಅತ್ಯಂತ ಕಿರಿಯ ವಿಶ್ವ ಚೆಸ್ ಚಾಂಪಿಯನ್ ಗುಕೇಶ್ ಅವರಿಗೆ 5 ಕೋಟಿ ರೂ. ನಗದು ಬಹುಮಾನವನ್ನು ಘೋಷಿಸಲು ನನಗೆ ಸಂತೋಷವಾಗಿದೆ. ಇವರ ಐತಿಹಾಸಿಕ ಗೆಲುವು ರಾಷ್ಟ್ರಕ್ಕೆ ಅಪಾರ ಹೆಮ್ಮೆ ಮತ್ತು ಸಂತೋಷ ತಂದಿದೆ. ಅವರು ಮುಂದೆಯೂ ಹೆಚ್ಚಿನ ಸಾಧನೆಯನ್ನು ಮಾಡಲಿ. ಯುವ ತಾರೆಗೆ ಬಂಬಲಿಸಿದ್ದಕ್ಕೆ ಉದಯ ನಿಧಿ ಸ್ಟಾಲಿನ್ ಮತ್ತು ತಮಿಳುನಾಡಿನ ಕ್ರೀಡಾ ಇಲಾಖೆಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
ಸಿಂಗಾಪುರದಿಂದ ಚೆನ್ನೈಗೆ ಹಿಂದಿರುಗಿದ ಬಳಿಕ ಗುಕೇಶ್ ಅವರಿಗೆ ಈ ನಗದು ಬಹುಮಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಘೋಷಿಸಿದ್ದಾರೆ.
ಡಿ ಗುಕೇಶ್ ಅವರು ಗುರುವಾರ ಹಾಲಿ ಚಾಂಪಿಯನ್ ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸಿ FIDE ವಿಶ್ವ ಚಾಂಪಿಯನ್ಶಿಪ್ 2024 ಅನ್ನು ಗೆದ್ದುಕೊಂಡಿದ್ದರು. ವಿಶ್ವನಾಥನ್ ಆನಂದ್ ನಂತರ ಡಿ ಗುಕೇಶ್ ಅವರು ಚೆ ಸ್ ನಲ್ಲಿ ಜಾಗತಿಕ ಪ್ರಶಸ್ತಿಯನ್ನು ಗೆದ್ದ ಎರಡನೇ ಭಾರತೀಯರಾಗಿದ್ದಾರೆ.